ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಕೊರೊನಾ ಭೀತಿ ನಡುವೆಯೂ ದಾವಣಗೆರೆಯಲ್ಲಿ ನಾಗರಪಂಚಮಿ ಸಂಭ್ರಮ..!

ದಾವಣಗೆರೆ: ಕೊರೊನಾ ಭೀತಿ ನಡುವೆಯೂ ರಾಜ್ಯಾದ್ಯಂತ ನಾಗರಪಂಚಮಿ ಹಬ್ಬ ಆಚರಿಸಲಾಗುತ್ತಿದೆ. ಬೆಣ್ಣೆನಗರಿಯಲ್ಲಿಯೂ ಹಬ್ಬದ ಸಡಗರ ಕಂಡು ಬಂತು.

ಕೊರೊನಾ ಸೋಂಕು ಹರಡುವ ಭೀತಿ ನಡುವೆಯೂನಾಗರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ನಾಗನ ಮೂರ್ತಿಗೆ ಹಾಲಿನ ಅಭಿಷೇಕ ಮಾಡಿ ನಾಗರಪಂಚಮಿ ಹಬ್ಬ ಮಾಡಲಾಗುತ್ತಿದೆ.

ನಗರದ ಗುಳ್ಳಮ್ಮ ದೇವಸ್ಥಾನದ ಬಳಿ ಇರುವ ನಾಗಪ್ಪನ ಮೂರ್ತಿಗೆ ಶ್ರದ್ಧಾ ಭಕ್ತಿಯಿಂದ ಮಹಿಳೆಯರು ಹಾಲೆರೆದರು. ನಾಗರ ವಿಗ್ರಹಕ್ಕೆ ಕಡಲೆ ಕಾಳು, ಹೋಳಿಗೆ ಎಡೆ ಮಾಡಿ ಭಕ್ತಿ ಸಮರ್ಪಿಸಲಾಯಿತು. ಹತ್ತಿಯಿಂದ ವಿಶೇಷ ಹಾರ ಮಾಡಿ ನಾಗಪ್ಪನ ವಿಗ್ರಹಕ್ಕೆ ಹಾಕಿ ಪೂಜೆ ಸಮರ್ಪಿಸಲಾಯಿತು. ಕೆಲವರು ಸೋಂಕಿನ ಭೀತಿಯಿಂದ ಈ ಬಾರಿ ಮನೆಯಲ್ಲೇ ಪೂಜೆ ಸಲ್ಲಿಸಿದರು.

ಶ್ರಾವಣ ಮಾಸದಲ್ಲಿ ಹೆಚ್ಚಿನ ಹಬ್ಬಗಳು, ಜಾತ್ರೆ ಇರುವ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ‌ ಮುಂದಾಗಿದ್ದು, ಹೆಚ್ಚಿನ ಜನರು ಗುಂಪುಗೂಡುವಂತಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದೆ. ಹೆಚ್ಚಿನ ಜನ ಸೇರದಂತೆ ಕಟ್ಟುನಿಟ್ಟಿನ ಆದೇಶವನ್ನೂ ಹೊರಡಿಸಿದೆ.

Edited By : Shivu K
PublicNext

PublicNext

13/08/2021 02:19 pm

Cinque Terre

159.79 K

Cinque Terre

0

ಸಂಬಂಧಿತ ಸುದ್ದಿ