ಸಕಲೇಶಪುರ: ದೀಪಾವಳಿ ಹಬ್ಬ ಅಂದ್ರೆ ಎಲ್ಲ ಕಡೆ ಒಂದೊಂದು ರೀತಿ ಆಚರಣೆ ಮಾಡ್ತಾರೆ. ವಿಶೇಷವಾಗಿ ಮಲೆನಾಡಿನಲ್ಲಿ ಮೂರು ದಿನ ದೀಪಾವಳಿ ಆಚರಣೆಯನ್ನು ರೈತಾಪಿ ಜನರು, ಕಾಫಿ ಬೆಳೆಗಾರರು ಮಾಡುತ್ತಾರೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬೊಮ್ಮನಕೆರೆ ಗ್ರಾಮದಲ್ಲಿ ವಿಶೇಷವಾಗಿ 'ಕೂಗಿನ ಸೊಪ್ಪು' ತರುವ ವಾಡಿಕೆ ಇದೆ. ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಿಂದ ಊರಿನ ಜನರು ದೀಪಾವಳಿ ಕೂಗು ಕೂಗುತ್ತಾ ವಿಶೇಷ ಸೊಪ್ಪನ್ನು ಸಂಗ್ರಹಿಸುತ್ತಾ ಹೋಗುತ್ತಾರೆ. ಮಂಗಳ ವಾದ್ಯದೊಂದಿಗೆ ಸಾಗುವ ಗ್ರಾಮಸ್ಥರು ಒಂದು ಕಿ.ಮೀ. ದೂರ ಸೊಪ್ಪನ್ನು ಸಂಗ್ರಹಿಸುತ್ತಾ ಸಾಗುತ್ತಾರೆ. ವಿಶೇಷ ಅಂದ್ರೆ 'ವುಂಡ್ರುಕೆ ಬೀಳು' ಅಂತಾ ಕರೆಯಲ್ಪಡುವ ಒಂದು ವಿಶೇಷ ಮುಳ್ಳಿನ ಬಳ್ಳಿ ಸಂಗ್ರಹಿಸಲೇಬೇಕು ಅನ್ನೋ ನಂಬಿಕೆ ಇಲ್ಲಿನ ಜನರದ್ದು.
ಆದ್ರಿಂದ ಕಾಡಿನಂತಹ ಪ್ರದೇಶಕ್ಕೆ ನುಗ್ಗಿ ಈ ಬಳ್ಳಿ ಸಂಗ್ರಹಿಸಿ ಹಂಚಿಕೊಳ್ಳುತ್ತಾರೆ. ಬಳಿಕ ಗುಡ್ಡದ ಮೇಲೆ ಇರುವ ದೇವಮರದ ಬಳಿ ಈ ಸೊಪ್ಪನ್ನು ಇಡಲಾಗುತ್ತೆ. ಅಲ್ಲಿ ಈ ಸೊಪ್ಪಿಗೆ ವಿಶೇಷ ಶಕ್ತಿ ದೊರೆಯುತ್ತೆ ಅನ್ನೊ ನಂಬಿಕೆ ಇದೆ. ಅಲ್ಲಿಗೆ ಈ ಸೊಪ್ಪು ಸಂಗ್ರಹಿಸುವಿಕೆ ಸಂಪನ್ನವಾಗುತ್ತೆ. ವಾದ್ಯಕ್ಕೆ ತಕ್ಕಂತೆ ಕುಣಿದು ಸಂಭ್ರಮಿಸುತ್ತಾರೆ. ಬಳಿಕ ಈ ಸೊಪ್ಪನ್ನು ಮನೆಗೆ ತಂದು ಪೂಜಿಸಿ, ಅದನ್ನು ಮನೆ ಹಾಗೂ ದನದ ಕೊಟ್ಟಿಗೆ ಸೂರಿಗೆ ಸಿಕ್ಕಿಸಲಾಗುತ್ತದೆ. ಇನ್ನು ಬಗೆ ಬಗೆಯ ಸೊಪ್ಪಿನಿಂದ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ ಅನ್ನೊದು ವೈಜ್ಞಾನಿಕ ಹಿನ್ನಲೆ. ಇನ್ನು ಇಡೀ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದ್ದು ಆದಿಶಕ್ತಿ ದೇವಿರಮ್ಮನವರ ಮುಖ ಧರಿಸಿ ದರ್ಶನ ಸಿಗೋದು ದೀಪಾವಳಿಯ ಇನ್ನೊಂದು ವಿಶೇಷ.
PublicNext
15/11/2020 06:16 pm