ರಾಜ್ಯದಲ್ಲಿ ಹಿಜಾಬ್, ಹಲಾಲ್ ಕಟ್, ಈದ್ಗಾ ಮೈದಾನ ಸೇರಿದಂತೆ ಜಾತಿ ಧರ್ಮದ ದಂಗಲ್ ಜೋರಾಗಿ ಎದ್ದಿರುವ ಈ ಸಮಯದಲ್ಲಿ ಭಾವೈಕ್ಯತೆಯ ಸಂದೇಶ ಸಾರುವ ಅಪರೂಪದ ಘಟನೆಗಳು ಆಗಾಗ ನಡೆಯುತ್ತವೆ.
ಇದಕ್ಕೆ ಸಾಕ್ಷಿ ಎನ್ನುವಂತೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಮಹಮ್ಮದ್ ರಫೀಕ್ ತಹಶೀಲ್ದಾರ್ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರೂ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.
ಧರ್ಮದ ಸಂಕೋಲೆಯನ್ನು ಬಿಟ್ಟು ಹಣೆಗೆ ತಿಲಕ ಇಟ್ಟು, ತಲೆಗೆ ಕೇಸರಿ ಟೋಪಿ ಹಾಕಿ ಕೇಸರಿ ಶಾಲು ಹಾಕಿ ಠಾಣೆಯ ಸಿಬ್ಬಂದಿಯೊಂದಿಗೆ ಗಣೇಶನಿಗೆ ಮಂಗಳರಾತಿ ಹಾಡು ಹೇಳಿ ಸಾಮರಸ್ಯ ಸಂದೇಶ ಸಾರಿದ್ದಾರೆ. ಇದುವರೆಗೂ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಗಣೇಶನನ್ನ ಪ್ರತಿಷ್ಠಾಪನೆ ಮಾಡುವ ವಾಡಿಕೆ ಇರಲಿಲ್ಲ. ಆದರೆ ಮುಸ್ಲಿಂ ಧರ್ಮದ ಇನ್ಸಪೆಕ್ಟರ್ ಮಹಮ್ಮದ್ ರಫೀಕ್ ಅವರು ಹೊಸದಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ವಿಶೇಷವಾಗಿದೆ. ಇನಸ್ಪೆಕ್ಟರ್ ಅವರ ಈ ಕೆಲಸಕ್ಕೆ ಹುಕ್ಕೇರಿಯ ಸಾರ್ವಜನಿಕರು ಹಾಗೂ ನಾಗರೀಕರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
PublicNext
01/09/2022 05:48 pm