ಕೊಂಕಣ ರೈಲ್ವೇ ಕಾರ್ಪೋರೇಶನ್ ನಿಂದ ರೈಲ್ವೇ ಕ್ರಾಸಿಂಗ್ ಜಾಗೃತಿ ಅಭಿಯಾನ ಹಳೆಯಂಗಡಿ ಇಂದಿರಾನಗರ ರೈಲ್ವೇ ಕ್ರಾಸಿಂಗ್ ಬಳಿ ನಡೆಯಿತು.
ಅಭಿಯಾನದಲ್ಲಿ ಕೊಂಕಣ ರೈಲ್ವೆ ಮಂಗಳೂರಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ಮಾತನಾಡಿ ರೈಲ್ವೆ ಗೇಟ್ ಬಳಿ ವಾಹನ ಸವಾರರು ಸುರಕ್ಷತೆಗೆ ಆದ್ಯತೆ ನೀಡುವುದರ ಜೊತೆಗೆ ಎಚ್ಚರಿಕೆಯಿಂದ ಚಲಿಸಬೇಕು. ರೈಲ್ವೆ ಗೇಟ್ ಬಳಿ ಕರ್ತವ್ಯ ನಿರ್ವಹಿಸುತ್ತಿರುವ ರೈಲ್ವೆ ಇಲಾಖೆಯ ನೌಕರರಿಗೆ ಕಿರುಕುಳ ನೀಡದೆ ಇಲಾಖೆಯ ನಿಯಮಗಳನ್ನು ಪಾಲಿಸಿಕೊಂಡು ಜಾಗೃತಿ ಅಭಿಯಾನವನ್ನು ಬೆಂಬಲಿಸಿ ಎಂದರು.
ಜಾಗೃತಿ ಅಭಿಯಾನ ಒಂದು ತಿಂಗಳು ಹಮ್ಮಿಕೊಂಡಿದ್ದು ಪ್ರತಿ ಕೊಂಕಣ ರೈಲ್ವೆಯ ಗೇಟಿನಲ್ಲಿ ಜಾಗೃತಿ ಅಭಿಯಾನ ನಡೆಯಲಿದೆ ಎಂದರು. ಬಳಿಕ ಸುರತ್ಕಲ್ ಸೆಕ್ಷನ್ ಇಂಜಿನಿಯರ್ ಶೇಷಗಿರಿ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಹಳೆಯಂಗಡಿ ರೈಲ್ವೇ ಕ್ರಾಸಿಂಗ್ ಬಳಿ ರೈಲ್ವೆ ಗೇಟ್ ಹಾಕಿ ಅಣಕು ಅಭಿಯಾನ ನಡೆಯಿತು. ಕೊಂಕಣ ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
PublicNext
09/06/2022 07:41 pm