ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉತ್ತರ ಕನ್ನಡ:ಮಳೆಗಾಗಿ ಹೆಣ್ಣು ಹೆಣ್ಣಿಗೆ ಮದುವೆ-ಇದು ಹಾಲಕ್ಕಿ ಜನಾಂಗದ ವಿಶಿಷ್ಟ ಸಂಪ್ರದಾಯ !

ಉತ್ತರ ಕನ್ನಡ:ಮಳೆಗಾಗಿ ಕಪ್ಪೆಗಳಿಗೆ, ಕತ್ತೆಗಳಿಗೆ ಮದ್ವೆ ಮಾಡ್ಸೋದು ಮಾಮೂಲಿ. ಆದರೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಹೆಣ್ಣು- ಹೆಣ್ಣಿಗೆ ಮದುವೆ ಮಾಡಿ, ಉತ್ತಮ ಮಳೆ- ಬೆಳೆಗಾಗಿ ಪ್ರಾರ್ಥಿಸಿಕೊಳ್ಳಲಾಗಿದೆ.

ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಹುಳಸಕೇರಿಯ ಹಾಲಕ್ಕಿ ಒಕ್ಕಲಿಗರು ಈ ಸಂಪ್ರದಾಯವನ್ನ ಆಚರಿಸಿಕೊಂಡು ಬರುತ್ತಿದ್ದಾರೆ. ಇಂಥದೊಂದು ಸಂಪ್ರದಾಯ ತಲತಲಾಂತರಗಳಿಂದಲೂ ನಡೆದುಕೊಂಡು ಬರುತ್ತಿದೆ.

ಗಂಡು-ಹೆಣ್ಣಿನ ವಿವಾಹ ಮಹೋತ್ಸವದ ಸಂಪ್ರದಾಯಗಳು ಹೇಗೆ ನಡೆಯುತ್ತವೋ, ಅವೆಲ್ಲವನ್ನೂ ಇಲ್ಲಿ ಅನುಸರಿಸಲಾಗುತ್ತದೆ.

ಮದುಮಕ್ಕಳನ್ನ ಮೆರವಣಿಗೆಯಲ್ಲಿ ಕರೆತರುವುದು, ಧಾರೆ ಎರೆಯೋದು, ಹಾರ ಬದಲಾವಣೆ, ತಾಳಿ ಕಟ್ಟೋದು, ಮುಯ್ಯಿ- ಅಂದ್ರೆ ಉಡುಗೊರೆ ನೀಡೋದು ಹೀಗೆ ಎಲ್ಲಾ ಸಂಪ್ರದಾಯಗಳೂ ಇಲ್ಲಿ ಚಾಚೂತಪ್ಪದೆ ನಿಜ ಮದುವೆಯಂತೆಯೇ ನಡೆಯುತ್ತದೆ. ಒಂದು ಲೆಕ್ಕದಲ್ಲಿ ಹೇಳ್ಬೇಕು ಅಂದ್ರೆ, ಗಂಡು- ಹೆಣ್ಣಿನ ನಿಜ ಮದುವೆಗಿಂತಲೂ ಹೆಚ್ಚು ಸಂಭ್ರಮ- ಸಡಗರದಿಂದಲೇ ಈ ಮದುವೆ ಈ ಬಾರಿ ನೆರವೇರಿತು.

ಈ ಮದುವೆಯಲ್ಲಿ ಜಾನಪದ ಹಾಡುಗಳನ್ನ ಮಾಡಲಾಯಿತು. ಈಗಿನ ಯುಗದ ಡಿಜೆ ಸದ್ದು ಕೂಡ ಇತ್ತು. ಇಲ್ಲಿನ ಕೇತಕಿ ವಿನಾಯಕ ಮತ್ತು ಕರಿದೇವರ ಸನ್ನಿಧಿಯಲ್ಲಿ ಈ ಮದುಮಕ್ಕಳ ಮದುವೆ ನಡೆಯಿತು. ಈ ಮದುವೆಯಿಂದ ದೇವೇಂದ್ರ ಮೆಚ್ಚಿ, ಮಳೆ ಕರುಣಿಸುತ್ತಾನೆ ಎಂಬ ನಂಬಿಕೆ ಇಲ್ಲಿಯ ಜನರದ್ದಾಗಿದೆ.

ವಿಭಿನ್ನವಾಗಿ ನಡೆದ ಈ ಮದುವೆ ಸಂಪ್ರದಾಯ ಎಲ್ಲರ ಗಮನ ಸೆಳೆಯಿತು. ಆಧುನಿಕತೆಯ ಭರಾಟೆಯಲ್ಲೂ ತಲತಲಾಂತರದ ಹಿಂದಿನ ಸಂಪ್ರದಾಯವನ್ನ ಈಗಲೂ ಹಾಲಕ್ಕಿ ಒಕ್ಕಲಿಗರು ಮುಂದುವರಿಸಿಕೊಂಡು ಬರುತ್ತಿರುವುದು ನಿಜಕ್ಕೂ

ಶ್ಲಾಘನೀಯವೇ ಸರಿ.

Edited By : Somashekar
PublicNext

PublicNext

08/08/2022 03:51 pm

Cinque Terre

47.26 K

Cinque Terre

2

ಸಂಬಂಧಿತ ಸುದ್ದಿ