ಕನಕಪುರ: ನಾವು ದುಡಿಯುವ ದ್ರವ್ಯದಲ್ಲಿ ದಾನ ಮಾಡುವುದರ ಮೂಲಕ ಹಿರಿಯರ ಪದ್ದತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಮರಳೆಗವಿ ಮಠದ ಪೀಠಾಧಿಪತಿಗಳಾದ ಶ್ರೀ ಡಾ.ಮುಮ್ಮಡಿ ಶಿವರುದ್ರ ಸ್ವಾಮೀಜಿಯವರು ತಿಳಿಸಿದರು.
ಕನಕಪುರ ತಾಲೂಕಿನ ಶ್ರೀ ಕ್ಷೇತ್ರ ಮರಳೆಗವಿ ಮಠದಲ್ಲಿ ಆಯೋಜಿಸಲಾಗಿದ್ದ ಶ್ರೀ ಶಿವಯೋಗಿ ಮುನೇಶ್ವರಸ್ವಾಮಿ ಕರ್ತೃ ಗದ್ದುಗೆಗೆ ಬೆಳ್ಳಿ ಪ್ರಭಾವಳಿ(ಮುಖವಾಡ) ಧಾರಣೆ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು. ಕೆರೆಗಳಿಗೆ ಕೋಡಿ ಹೇಗೆ ಅವಶ್ಯಕತೆಯೋ ಹಾಗೆ ನಾವು ಸಂಪಾದನೆ ಮಾಡುವ ಧನ ಸಂಪತ್ತಿಗೆ ದಾನ ಎನ್ನುವ ಕೋಡಿ ಇರಲೇಬೇಕು ದಾನ ಮಾಡುವುದು ಭಕ್ತಿಯ ಧ್ಯೋತಕವಾಗಿದೆ ಆಗ ಅದಕ್ಕೊಂದು ಸಾರ್ಥಕತೆ ಬರುತ್ತದೆ ಎಂದು ಹೇಳಿದರು.
ದಾನ ಮಾಡುವುದು ನಮ್ಮ ಧರ್ಮವಾಗಿದೆ ಮಠ ಮಾನ್ಯಗಳಿಗೆ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ನಮ್ಮ ಸಂಸ್ಕೃತಿಯನ್ನು ನಾವು ಉಳಿಸಬೇಕಿದೆ ಎಂದರು. ಸಾಧಾರಣ ರೈತ ಕುಟುಂಬದಿಂದ ಬಂದಿರುವ ಶ್ರೀನಿವಾಸ ಮತ್ತು ಮಹದೇವಮ್ಮ ದಂಪತಿಗಳು ಬೇಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ಬರುವ ಹಣದಲ್ಲಿ ತಮಗೆ ಉಪಯೋಗಿಸಿಕೊಂಡು ೩ ಲಕ್ಷ ವೆಚ್ಚದಲ್ಲಿ ಬೆಳ್ಳಿ ಮುಖವಾಡ ನೀಡಿರುವುದು ಅವರ ಔದಾರ್ಯತೆಯನ್ನು ತೋರಿಸುತ್ತದೆ ಅವರಿಗೆ ಶ್ರೀಮಠದ ಮೇಲಿರುವ ಭಕ್ತಿಯನ್ನು ತೋರಿಸುತ್ತದೆ ಎಂದು ಹೇಳಿದರು.
ಅಮವಾಸ್ಯೆಯ ಪ್ರಯುಕ್ತ ಶ್ರೀ ಶಿವಯೋಗಿ ಮುನೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಅಷ್ಟೋತ್ತರ ಕಾರ್ಯಕ್ರಮ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಶ್ರೀ ಮಠದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಶಿಕ್ಷಕರು ಸಿಬ್ಬಂದಿಗಳು ಹಾಗೂ ನೂರಾರು ಭಕ್ತಾದಿಗಳು ಹಾಜರಿದ್ದರು.
PublicNext
28/08/2022 08:00 pm