ಸಾವಿರ ಪದಗಳಲ್ಲಿ ಹೇಳುವುದನ್ನು ಒಂದು ಚಿತ್ರ ಹೇಳುತ್ತದೆ ಎನ್ನುವುದಕ್ಕೆ ಈ ಕಲೆಯೇ ಬೆಸ್ಟ್ ಉದಾಹರಣೆ. ಫೆ.14 ಭಾರತೀಯರಿಗೆ ಕರಾಳ ದಿನ. ನಮ್ಮ ಹೆಮ್ಮೆಯ 40 ಯೋಧರನ್ನು ಕಳೆದುಕೊಂಡು ಇಲ್ಲಿಗೆ 3 ವರ್ಷವಾಯಿತು.
2019 ರ ಫೆ.14 ಇಡೀ ದೇಶವೇ ಕಣ್ಣೀರಲ್ಲಿ ಮುಳುಗಿತ್ತು. ಪ್ರತಿ ಮನೆಯಲ್ಲಿ ಶೋಕ ಛಾಯೆ ಆವರಿಸಿತ್ತು. ಮನೆ, ಮಕ್ಕಳು, ಮಡದಿ, ಹೆತ್ತವರನ್ನು ಬಿಟ್ಟು ದೇಶ ಸೇವೆಗೆಂದು ಹೋದ ನಮ್ಮ ಹೆಮ್ಮೆಯ 40 ಸಿಆರ್ ಪಿಎಫ್ ಯೋಧರ ಮೇಲೆ ಜಮ್ಮು, ಕಾಶ್ಮೀರದ ಪುಲ್ವಾಮಾದಲ್ಲಿ ಪಾಪಿ ಪಾಕಿಸ್ತಾನ ಹಾಗೂ ಕುತಂತ್ರಿ ಜೈಶ್-ಇ-ಮೊಹಮ್ಮದ್ ಸಂಘಟನೆಯ ಉಗ್ರಗಾಮಿಗಳು ಅಟ್ಟಹಾಸ ಮೆರೆದಿದ್ದರು.
ದುರುಳರ ಮೋಸಕ್ಕೆ 40 ಸಿಆರ್ ಪಿಎಫ್ ಯೋಧರು ಪ್ರಾಣ ಕಳೆದುಕೊಂಡ ಕರಾಳ ದಿನವನ್ನು ಚಿತ್ರಕಲಾಕಾರರೊಬ್ಬರು ತಮ್ಮದೇ ಭಾಷೆಯಲ್ಲಿ ವೀರ ಸೈನಿಕರಿಗೆ ಗೌರವ ಸೂಚಿಸಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
PublicNext
15/02/2022 03:32 pm