ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಣರಾಜ್ಯೋತ್ಸವ ಪರೇಡ್ ನಲ್ಲಿ ಯುದ್ಧ ವಿಮಾನ ಹಾರಿಸಿದ ಮೊದಲ ಮಹಿಳಾ ಪೈಲಟ್ ಭಾವನಾ ಕಾಂತ್!

ನವದೆಹಲಿ : ಇಂದು ಎಲ್ಲರೂ ರಾಷ್ಟ್ರ ಹಬ್ಬದ ಸಂಭ್ರಮದಲ್ಲಿದ್ದಾರೆ ಭಾವನಾ ಕಾಂತ್ ಈ ಹಬ್ಬದ ಮೆರಗು ಹೆಚ್ಚಿಸಿದ್ದಾರೆ. ದೇಶದ ಮೂವರು ಮಹಿಳಾ ಯುದ್ಧ ಪೈಲಟ್ ಗಳಲ್ಲಿ ಭಾವನಾ ಕಾಂತ್ ಒಬ್ಬರು ಲೆಫ್ಟಿನೆಂಟ್ ಭಾವನಾ ಕಾಂತ್ 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಜಪಥ್ ನಲ್ಲಿ ನಡೆದ ಭಾರತೀಯ ವಾಯುಪಡೆಯ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಸಾಕ್ಷಿಯಾದರು.

ಭಾರತೀಯ ವಾಯುಪಡೆ ಹಗುರ ಯುದ್ಧವಿಮಾನ, ಹಗುರ ಯುದ್ಧ ಹೆಲಿಕಾಪ್ಟರ್ ಮತ್ತು ಸುಕೊಯ್-30 ಯುದ್ಧ ವಿಮಾನಗಳ ಪ್ರದರ್ಶನವನ್ನು ಏರ್ಪಡಿಸಿತ್ತು. ಇನ್ನು 140 ವಾಯು ರಕ್ಷಣಾ ರೆಜಿಮೆಂಟ್ ನ ಸುಧಾರಿತ ಸ್ಚಿಲ್ಕ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಕ್ಯಾಪ್ಟನ್ ಪ್ರೀತಿ ಚೌಧರಿ ಮುನ್ನಡೆಸಿದ್ದಾರೆ.ಇಂದು ಪಥಸಂಚಲನದಲ್ಲಿ ಭಾಗವಹಿಸಿದ ಏಕೈಕ ಮಹಿಳಾ ರೆಜಿಮೆಂಟ್ ಕಮಾಂಡರ್ ಕ್ಯಾಪ್ಟನ್ ಪ್ರೀತಿ ಚೌಧರಿ ಆಗಿದ್ದಾರೆ.

ಸ್ಚಿಲ್ಕ ಶಸ್ತ್ರಾಸ್ತ್ರ ವ್ಯವಸ್ಥೆ ಆಧುನಿಕ ರಾಡಾರ್ ಮತ್ತು ಡಿಜಿಟಲ್ ಅಗ್ನಿ ನಿಯಂತ್ರಣ ಕಂಪ್ಯೂಟರ್ ನ್ನು ಹೊಂದಿದೆ. ಇಂದು ಮಹಿಳೆಯರು ಕೂಡ ದೇಶದ ಮಿಲಿಟರಿಯ ಮೂರೂ ಪಡೆಗಳಲ್ಲಿ ತಮ್ಮ ಶಕ್ತಿ, ಸಾಮರ್ಥ್ಯ, ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ರಾಜಪಥ್ ನಲ್ಲಿ ನಡೆದ ಪರೇಡ್ ನಲ್ಲಿ ಎನ್ ಸಿಸಿ ಹೆಣ್ಣುಮಕ್ಕಳು ಮಹಾರಾಷ್ಟ್ರದ ಎನ್ ಸಿಸಿ ನಿರ್ದೇಶನಾಲಯದ ಹಿರಿಯ ಅಧೀನ ಅಧಿಕಾರಿ ಸಮೃದ್ಧಿ ಹರ್ಷಲ್ ಸಂತ್ ನೇತೃತ್ವದಲ್ಲಿ ಪಥ ಸಂಚಲನ ಸಾಗಿದರು.

Edited By : Nirmala Aralikatti
PublicNext

PublicNext

26/01/2021 11:45 am

Cinque Terre

72.25 K

Cinque Terre

5

ಸಂಬಂಧಿತ ಸುದ್ದಿ