ವರದಿ- ಗೀತಾಂಜಲಿ
ಚಾಮರಾಜನಗರ:ದೇವಸ್ಥಾನದ ಸಿಬ್ಬಂದಿಯ ಕಣ್ತಪ್ಪಿನಿಂದ ಪ್ರಸಾದದ ಜೊತೆ ಭಕ್ತನ ಪಾಲಾಗಿದ್ದ 2.93 ಲಕ್ಷ ರೂಪಾಯಿಯನ್ನ ಈಗ ಭಕ್ತ ಹಿಂತಿರುಗಿಸಿದ್ದಾನೆ.
ಬೆಂಗಳೂರು ಜಿಲ್ಲೆ ಯಶವಂತಪುರ ತಾಲೂಕು ಮೇದರಹಳ್ಳಿಯ ನರಸಿಂಹಮೂರ್ತಿ ಎಂಬ ಭಕ್ತ ಹಣ ಹಿಂದಿರುಗಿಸಿದ್ದು, ಪೊಲೀಸರ ಸಮ್ಮುಖದಲ್ಲಿ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ ಬಸವರಾಜುಗೆ ಭಕ್ತ ಹಣ ಕೊಟ್ಟಿದ್ದಾರೆ.
ಅಭಿಷೇಕ ಪ್ರಸಾದದ ಟಿಕೆಟ್ ಪಡೆದಿದ್ದ ಭಕ್ತ ನರಸಿಂಹ ಮೂರ್ತಿಗೆ ದೇವಸ್ಥಾನದ ಸಿಬ್ಬಂದಿ ನಾಗಭೂಷಣ ಆಕಸ್ಮಿಕವಾಗಿ ಪ್ರಸಾದದ ಚೀಲದ ಜೊತೆಗೆ ಹಣವಿದ್ದ ಚೀಲವೊಂದನ್ನುಎತ್ತಿಕೊಟ್ಟಿದ್ದರು. ಇದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಇನ್ನು ಈ ಪ್ರಕರಣ ಮಲೆಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು,ಮನೆಯಲ್ಲಿ ಪ್ರಸಾದದ ಜೊತೆ ಹಣವಿರುವುದನ್ನು ನೋಡಿ ಭಕ್ತ ಗಾಬರಿಗೊಂಡಿದ್ದರು. ಆದರೆ, ಆ ಕೂಡಲೇ ದೇವಸ್ಥಾನದ ಅಧಿಕಾರಿಗಳನ್ನು ಸಂಪರ್ಕಿಸಿ ವಿಷಯ ತಿಳಿಸಿ ಭಕ್ತ ನರಸಿಂಹಮೂರ್ತಿ ಹಣ ವಾಪಸ್ ಕೊಟ್ಟಿದ್ದಾರೆ.
PublicNext
31/07/2022 12:35 pm