ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಹಬ್ಬಕ್ಕೆ ಸಿದ್ದತೆ ಶುರು ಆಗಿದೆ. ಅಕ್ಟೋಬರ್ ತಿಂಗಳಲ್ಲಿ ನಡೆಯೋ ಈ ನಾಡ ಹಬ್ಬಕ್ಕೆ ಈಗಲೇ ದಸರಾ ಗಜಪಯಣಕ್ಕೆ ತಯಾರಿ ಶುರು ಆಗಿದೆ.
ಹೌದು. ಆಗಸ್ಟ್-07 ರಂದು ಗಜಪಡೆ ಮೈಸೂರಿಗೆ ಬರ್ತಾಯಿದೆ. ಮೊದಲ ಹಂತದಲ್ಲಿ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಮೈಸೂರಿಗೆ ಬರುತ್ತವೆ. ಆ ಬಳಿಕ ಎರಡೇ ಹಂತದಲ್ಲಿ ಐದೋ ಇಲ್ಲವೆ ಆರೋ ಆನೆಗಳು ಇಲ್ಲಿಗೆ ಬರುತ್ತವೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ತಯಾರಿ ನಡೆಸಿದೆ. ವಿಶೇಷವೆಂದ್ರೆ ಈ ಸಲ ಹೊಸ ಆನೆಗಳಾದ ಮಹೇಂದ್ರ,ಅಜಯ, ಭೀಮಾ, ಗಣೇಶ್ ಹಾಗೂ ಸುಗ್ರೀವಾ ಕೂಡ ಬರೋ ಸಾಧ್ಯತೆ ಇದೆ.
PublicNext
30/07/2022 08:47 am