ಹೊಸದಿಲ್ಲಿ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಈ ಬಾರಿಯ ಗಣರಾಜ್ಯ ದಿನದ ಅತಿಥಿ ಎಂದು ಹೇಳಲಾಗಿತ್ತು.
ಆದರೆ ಬೋರಿಸ್ ಭಾರತ ಭೇಟಿ ರದ್ದಾದ ಹಿನ್ನೆಲೆಯಲ್ಲಿ ಸುರಿನಾಮ್ ರಿಪಬ್ಲಿಕ್ ನ ಅಧ್ಯಕ್ಷ, ಭಾರತೀಯ ಮೂಲದ ಚಂದ್ರಿಕಾಪ್ರಸಾದ್ ಸಂತೋಖೀ ಅವರು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ರಾಜಪಥದಲ್ಲಿ ನಡೆಯುವ ಪರೇಡ್ ನಲ್ಲಿ ಸಂತೋಖೀ ಪಾಲ್ಗೊಳ್ಳುವುದು ಬಹುತೇಕ ಖಚಿತ ಎಂದು ಪ್ರಧಾನಿ ಕಾರ್ಯಾಲಯದ ಮೂಲಗಳು ತಿಳಿಸಿವೆ.
PublicNext
11/01/2021 10:05 am