ಬೆಂಗಳೂರು: ದೊಡ್ಡ ಹಬ್ಬಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ವಿಶೇಷ..
ಈ ಹಬ್ಬವನ್ನು ಎಲ್ಲ ಸಮುದಾಯವರು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.
ಕೊರೊನಾ ಮಧ್ಯೆಯೂ ಜನ ತಕ್ಕ ಮಟ್ಟಿಗೆ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದಾರೆ.
ಇದರ ನಡುವೇ ಹಬ್ಬದ ಸಂಭ್ರಮ ಹೆಚ್ಚಿಸಲು ಪಟಾಕಿಗಳು ಬಹುಮುಖ್ಯ.
ಮೊದಮೊದಲು ಪಟಾಕಿ ಬೇಡ ಎಂದಿದ್ದ ಸರ್ಕಾರ ಕೊನೆಗೆ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ನೀಡಿ ಹಬ್ಬದ ಮೆರಗು ಹೆಚ್ಚಿಸಿದೆ.
ಇದರಿಂದ ರಾಜ್ಯದಲ್ಲಿ 50 ಕೋಟಿ ಪಟಾಕಿ ವ್ಯಾಪಾರವಾಗುವ ನಿರೀಕ್ಷೆ ಹೊಂದಲಾಗಿದೆ.
ದೀಪಾವಳಿ ಹಬ್ಬಕ್ಕೆ ಸಾಂಪ್ರದಾಯಿಕ ಪಟಾಕಿ ಮಾರಾಟ ನಿಷೇಧದ ಪ್ರಸ್ತಾಪವಾಗಿದ್ದರಿಂದ ಆತಂಕಕ್ಕೆ ಒಳಗಾಗಿದ್ದ ಮಾರಾಟಗಾರರು, ವಿತರಕರು ಸರ್ಕಾರದ ನಿರ್ಧಾರಕ್ಕೆ ತಲೆದೂಗಿದ್ದಾರೆ.
ದೀಪಾವಳಿ ಹಬ್ಬಕ್ಕೆ ಹಸಿರು ಪಟಾಕಿ ಮಾರಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿರುವುದರಿಂದ ಪಟಾಕಿ ಮಾರಾಟಗಾರರು, ವಿತರಕರಲ್ಲಿ ನೆಮ್ಮದಿ ಮೂಡಿಸಿದೆ.
ರಾಜ್ಯವಾರು 50 ಮಂದಿ ಸಗಟು ಮಾರಾಟಗಾರರು, ವಿತರಕರು ಇದ್ದಾರೆ. ಬೆಂಗಳೂರಿನಲ್ಲಿ 20ಕ್ಕೂ ಹೆಚ್ಚು ಮಂದಿ ಅಧಿಕೃತ ಡೀಲರ್ಸ್ ಇದ್ದಾರೆ.
ತಮಿಳುನಾಡಿನ ಶಿವಕಾಶಿಯಿಂದ ಪಟಾಕಿ ತರಿಸಲಾಗುತ್ತದೆ. ರಾಜ್ಯದಲ್ಲಿ ಪಟಾಕಿ ವಿತರಕರು ಈಗಾಗಲೇ ಶೇ.25ರಷ್ಟುಅಂದರೆ .30 ಕೋಟಿ ಮಾತ್ರ ಸರಕುಗಳನ್ನು ಖರೀದಿಸಿದ್ದಾರೆ.
ಸದ್ಯ ಸರ್ಕಾರ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದರಿಂದ ಮುಂದಿನ ದಿನಗಳಲ್ಲಿ ವಿತರಕರು .30-40 ಕೋಟಿ ಪಟಾಕಿಗಳನ್ನು ತರಿಸಬಹುದು.
PublicNext
07/11/2020 08:42 am