ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇಂದ್ರ ಸರ್ಕಾರದಿಂದ 30 ಲಕ್ಷ ನೌಕರರಿಗೆ ಬಂಪರ್ ಬೋನಸ್ ಗಿಫ್ಟ್

ದೆಹಲಿ : ದಸರಾ ಹಬ್ಬದ ಪ್ರಯುಕ್ತ ಕೇಂದ್ರ ಸರ್ಕಾರ ತನ್ನ 30 ಲಕ್ಷ ನೌಕರರಿಗೆ ಬರೋಬ್ಬರಿ 3,737 ಕೋಟಿ ರೂಪಾಯಿ ಬೋನಸ್ ಹಣವನ್ನು ಒಂದು ವಾರದೊಳಗೆ ಬಿಡುಗಡೆಗೊಳಿಸುವುದಾಗಿ ಘೋಷಣೆ ಮಾಡಿ ಹಬ್ಬದ ಮೆರಗನ್ನು ಇಮ್ಮಡಿಗೊಳಿಸಿದೆ.

ದೇಶದಲ್ಲಿ ಕೊರೊನಾ ಬಿಕ್ಕಟ್ಟಿನಿಂದ ಆರ್ಥಿಕ ಪರಿಸ್ಥಿತಿ ದಿವಾಳಿಯತ್ತ ಸಾಗುತ್ತಿದೆ.

ಕುಸಿದಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಕೇಂದ್ರ ಸರಕಾರ ಪ್ಲಾನ್ ಮಾಡಿದ್ದು, 30ಲಕ್ಷ ಸರಕಾರಿ ನೌಕರರಿಗೆ ಬೋನಸ್ ನೀಡಲು ಅನುಮೋದನೆ ನೀಡಿದೆ.

ಇದರಿಂದ ಆರ್ಥಿಕತೆಗೆ ಉತ್ತೇಜನ ಸಿಗುವ ನಿರೀಕ್ಷೆ ಮಾಡಲಾಗಿದೆ.

ಕೊರೊನಾ ಹೊಡೆತದಿಂದ ಉತ್ಪಾದನಾ, ಸೇವಾ ವಲಯಗಳೆರಡು ಪೆಟ್ಟು ತಿಂದಿವೆ. ಜನರಿಗೆ ಕೊಳ್ಳುವ ಸಾಮರ್ಥ್ಯವೇ ಕಡಿಮೆ ಆಗಿದೆ.

ಈ ಸಂಕಷ್ಟದಲ್ಲೂ ಕೇಂದ್ರ ಸರಕಾರ ಸರಕಾರಿ ಉದ್ಯೋಗಿಗಳಿಗೆ ಬೋನಸ್ ಘೋಷಣೆ ಮಾಡಿದ್ದು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.

ಕನಿಷ್ಠ 30 ಲಕ್ಷ ಗೆಜೆಟೆಡ್ ಅಲ್ಲದ ಕೇಂದ್ರ ಸರ್ಕಾರಿ ನೌಕರರು ಬೋನಸ್ ಪ್ರಯೋಜನ ಪಡೆಯಲಿದ್ದಾರೆ.

ಹಬ್ಬಕ್ಕಿಂತ ಮುಂಚಿತವಾಗಿ ಸರ್ಕಾರಿ ನೌಕರರನ್ನು ಹುರಿದುಂಬಿಸಲು ಇದು ಸಹಕಾರಿಯಾಗಲಿದೆ. ಇದರಿಂದ ಖರೀದಿ ಹೆಚ್ಚಾಗಿ, ಆರ್ಥಿಕತೆಗೆ ಉತ್ತೇಜನ ಸಿಗಲಿದೆ.

Edited By : Nirmala Aralikatti
PublicNext

PublicNext

22/10/2020 08:15 am

Cinque Terre

88.47 K

Cinque Terre

14

ಸಂಬಂಧಿತ ಸುದ್ದಿ