ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿಯಲ್ಲಿ ಹಾರ, ತುರಾಯಿ ನಿಷೇಧದ ಆದೇಶಕ್ಕೆ ಕಿಮ್ಮತ್ತಿಲ್ಲ : ಭರ್ಜರಿ ಶಿಕ್ಷಕರ ದಿನಾಚರಣೆ !

ಅಥಣಿ : ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ, ದುಬಾರಿ ವೆಚ್ಚದ ಉಡುಗೊರೆಗಳನ್ನು ನೀಡುವುದನ್ನು ನಿಷೇಧಿಸಿದ ಸರಕಾರದ ಆದೇಶವನ್ನು ಅಥಣಿ ಶಾಸಕರ ಸಮ್ಮುಖದಲ್ಲಿಯೇ ಅಥಣಿ ತಾಲೂಕಾಡಳಿತ ಉಲ್ಲಂಘಿಸಿದೆ.

ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ, ದುಬಾರಿ ಬೆಲೆಯ ಉಡುಗೊರೆ ನೀಡುವುದನ್ನು ನಿಷೇಧಿಸಿ ಮುಖ್ಯಮಂತ್ರಿಯವರು ಕೆಲ ದಿನಗಳ ಹಿಂದೆ ಆದೇಶ ಹೊರಡಿಸಿದ್ದರು. ಹಾರ, ತುರಾಯಿ ಬದಲಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬೇಕು ಎಂದೂ ಸಹ ಆದೇಶ ಹೊರಡಿಸಿದ್ದರು.

ಆದರೆ ಇವತ್ತು ಅಥಣಿಯ ಗಚ್ಚಿನಮಠದ ಆವರಣದಲ್ಲಿ ಅಥಣಿ ತಾಲೂಕಾಡಳಿತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ತಾಲೂಕಾಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹೇಶ ಕುಮಠಳ್ಳಿ ಅವರು ಶಾಲು, ಹೂವಿನ ಹಾರದ ಮಾಲೆ ಮತ್ತು ಸ್ಮರಣಿಕೆಯೊಂದಿಗೆ ಸನ್ಮಾನಿತರಾದರು. ಹಾಗೂ ತಾಲೂಕಾಡಳಿತದ ಪ್ರಮುಖ ಅಧಿಕಾರಿಗಳಿಗೆ, ನಿವೃತ್ತ ಶಿಕ್ಷಕರಿಗೆ ಸೇರಿದಂತೆ ವೇದಿಕೆ ಮೇಲೆ ಸುಮಾರು 50 ಕ್ಕೂ ಅಧಿಕ ಜನರಿಗೆ ಹಾರ, ಶಾಲು, ಸ್ಮರಣಿಕೆ ನೀಡಿ ಭರ್ಜರಿಯಾಗಿ ಸನ್ಮಾನ ಮಾಡಿ ಸರಕಾರದ ಆದೇಶವನ್ನು ಗಾಳಿಗೆ ತೂರಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಕ್ಷೇತ್ರಶಿಕ್ಷಣಾಧಿಕಾರಿ ಬಸವರಾಜ ತಳವಾರ ಹಾಗೂ ತಹಶೀಲ್ದಾರ ಸುರೇಶ ಮುಂಜೆ ಅವರು ಖುದ್ದಾಗಿ ಮುಂದೆ ನಿಂತು ಪುಸ್ತಕ ಕೊಡುವುದರ ಬದಲಿಗೆ ಹಾರ, ಶಾಲು, ಸ್ಮರಣಿಕೆ ಕೊಟ್ಟು ಸನ್ಮಾನಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ.

ಈ ವೇಳೆ ಪ್ರೋ ವಿ ಎಸ್ ಮಾಳಿ, ಶಿಕ್ಷಕರ ಸಂಘದ ಅಧ್ಯಕ್ಷ ಜಿ ಎಂ ಹಿರೇಮಠ, ತೆಲಸಂಗದ ವೀರೇಶ್ವರ ದೇವರು, ತಹಶೀಲ್ದಾರ ಸುರೇಶ ಮುಂಜೆ, ತಾ.ಪಂ ಅಧಿಕಾರಿ ಕರಬಸಪ್ಪಗೋಳ, ಜಿ.ಪಂ ಅಧಿಕಾರಿ ವೀರಣ್ಣ ವಾಲಿ, ಉದಯಗೌಡ ಪಾಟೀಲ, ಎಸ್.ಎಂ ರಾಠೋಡ, ಎಸ್.ಎಸ್ ನೀಲಾರೆ, ಎ. ಬಿ ಕುಟಕೋಳಿ, ರಾಮಣ್ಣ ಧರಿಗೌಡ, ಶ್ವೇತಾ ಹಾಡಕಾರ, ಬಿ. ಎಲ್ ಮೂಲಿಮನಿ, ಸೇರಿದಂತೆ ಇತರರು ಇದ್ದರು.

Edited By : Somashekar
PublicNext

PublicNext

05/09/2022 10:45 pm

Cinque Terre

77.58 K

Cinque Terre

1

ಸಂಬಂಧಿತ ಸುದ್ದಿ