ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಪುಟ್ಟ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಂದನ ವನ; ಪರಿಸರ ಕಾಳಜಿಯೇ ಮುಖ್ಯ ಗುರಿ

ಗದಗ: ಪ್ರಕೃತಿ ಮನುಷ್ಯನ ಜೀವನಕ್ಕೆ ಎಲ್ಲವನ್ನೂ ಕೊಟ್ಟಿದೆ. ಆದರೆ ಮನುಷ್ಯ ತನ್ನ ವೈಯಕ್ತಿಕ ಪ್ರಯೋಜನಕ್ಕಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸಿದ್ದಾನೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಮುರಾರ್ಜಿ ದೇಸಾಯಿ ವಸತಿ ಶಾಲೆ ತಲೆಯೆತ್ತಿ ನಿಂತಿದ್ದು, ಶಾಲೆಯೋ ಅಥವಾ ಉದ್ಯಾನವನವೋ ಎಂಬುವಂತ ಪರಿಸರದ ಕಾಳಜಿಗೆ ಸಾಕ್ಷಿಯಾಗಿದೆ.

ಹೌದು. ಸರ್ಕಾರಿ ಶಾಲೆಯ ಆವರಣವನ್ನು ಚಂದವಾಗಿಸಲು ಸುಮಾರು ಬಗೆಯ 500 ಗಿಡಗಳು ಸುಮಾರು 300 ವಿವಿಧ ಬಗೆಯ ಹೂವಿನ ಗಿಡಗಳು ಹಾಗೂ ಕೈ ತೋಟ ಇರುವುದರಿಂದ ಶಾಲೆಯಲ್ಲಿ ಪರಿಸರ ಕಾಳಜಿ ಎದ್ದು ಕಾಣುತ್ತಿದೆ. ಅಲಂಕಾರಿಕ ಗಿಡಗಳು, ಹಣ್ಣಿನ ಗಿಡಗಳು, ಕೈ ತೋಟದಿಂದ ಶಾಲೆಯೋ ಅಥವಾ ಉದ್ಯಾನವನವೊ ಎಂಬತ್ತೆ ಕಾಣುತ್ತಿದೆ. ಗಿಡಗಳು ಶಾಲೆಯಲ್ಲಿ ತಂಪು ನೀಡುತ್ತಿದ್ದು, ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲು ಹಾಗೂ ಪರಿಸರವನ್ನು ಶುದ್ಧವಾಗಿಡಲು ಕಾರಣವಾಗಿದೆ.

ಇನ್ನೂ ಚಿಕ್ಕ ಗ್ರಾಮದಲ್ಲಿ ಇರುವ ಈ ಶಾಲೆಯೂ ಸುಂದರ ಶಾಲೆಯ ನಂದನ ವನವಾಗಿ ನಿರ್ಮಾಣವಾಗಿದ್ದು, ಸಾರ್ವಜನಿಕರು ಬಂದು ಹೂವಿನ ಗಿಡಗಳು ಕಡೆ ನಿಂತು ಫೋಟೋ ಕ್ಲಿಕ್ಕಿಸಿ ಕೊಂಡು ಹೋಗುತ್ತಿದ್ದಾರೆ. ಈ ಶಾಲೆಯು ಈಗ ಪ್ರವಾಸಿ ತಾಣವಾಗಿದೆ. ಇಂದು ಎಲ್ಲೆಡೆ ನಗರೀಕರಣದ ಬಗ್ಗೆಯೇ ಹೆಚ್ಚಿನ ಒಲವಿದ್ದು, ಪರಿಸರ ಕಾಳಜಿ ಕ್ಷಿಣಿಸುತ್ತಿದೆ. ಆದರೆ ಈ ಶಾಲೆಯು ಪರಸರ ಬಗ್ಗೆ ಬಹಳ ಕಾಳಜಿ ವಹಿಸಿದೆ.

2018- 2019ರಲ್ಲಿ ಗ್ರಾಮ ಪಂಚಾಯತ ಹಾಗೂ ತೋಟಗಾರಿಕೆ ಇಲಾಖೆಯ ಸಹಕಾರದೊಂದಿಗೆ ಸಾವಿರಾರು ಸಸಿಗಳನ್ನು ನೆಡಲಾಯಿತು. ಅಂದಿನಿಂದ ಶಾಲೆಯ ಮುಖ್ಯ ಶಿಕ್ಷಕ ನಾಗರಾಜ ಕಳಾಸಾಪುರ ಅವರ ನೇತೃತ್ವದಲ್ಲಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಸಿಬ್ಬಂದಿ ಸಹಕಾರದೊಂದಿಗೆ ಇಂದು ಶಾಲೆಯು ಸುಂದರ್ ಉದ್ಯಾನವನವಾಗಿ ಮಾರ್ಪಟ್ಟಿದೆ, ಹಣ್ಣಿನ ಗಿಡಗಳು ಪಲವನ್ನು ಕೊಡತ್ತಿವೆ. ಸುಂದರ ಹೂವಿನ ಗಿಡಗಳು ರಾರಾಜಿಸುತ್ತಿವೆ. ಕಾಣಸಿಗುವ ಪ್ರಮುಖ ಗಿಡಗಳು ಬನ್ನಿ, ಬಿಲ್ಪತ್ರೆ, ಅರಳಿಗಿಡ ಮಾವಿನಗಿಡ ತೆಂಗು, ಹುಣಸೆ, ಸೀತಾಪಲ್, ಚಿಕ್ಕು ಬೇವು, ಪಪ್ಪಾಯಿ, ಹೀಗೆ ಸುಮಾರು 500ಗಿಡಗಳು ಇವೆ ವಿವಿಧ ಬಗೆಯ ಹೂವಿನಗಿಡಗಳು ಅಲಂಕಾರಿಕ ಹೂವುಗಳು ಕಾಣ ಸಿಗುತ್ತವೆ.

Edited By : Nagesh Gaonkar
PublicNext

PublicNext

11/06/2022 10:07 am

Cinque Terre

98.32 K

Cinque Terre

3