ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಎಳ್ಳಮಾವಾಸ್ಯೆ ಸಂಭ್ರಮದಲ್ಲಿ ಮಿಂದೆದ್ದು ಜಮೀನುಗಳಿಗೆ ವಿಶೇಷ ಪೂಜೆ ಸಲ್ಲಿಸಿದ ರೈತರು

ಯಾದಗಿರಿ: ಎಳ್ಳಮಾವಾಸ್ಯೆ ಹಬ್ಬ ಎಂದರೆ ಜನರಿಗೆ ಎಲ್ಲಿಲ್ಲದ ಖುಷಿ. ಬೆಳಗ್ಗೆ ಎತ್ತು ಮತ್ತು ಎತ್ತಿನ ಬಂಡಿಯನ್ನು ಸಿಂಗರಿಸಿ ಮನೆಯಲ್ಲಿ ಮಾಡಿದ ವೆರೈಟಿ ವೆರೈಟಿ ಅಡುಗೆಯನ್ನು ಬಂಡಿಯಲ್ಲಿ ತೆಗೆದುಕೊಂಡು ಹೊಲಗಳಿಗೆ ತೆರಳಿ ಬೆಳೆಯ ಪೂಜೆ ಮಾಡುವುದರ ಜೊತೆಗೆ ಭೂಮಿ ತಾಯಿಗೆ ಚರಗ ಚೆಲ್ಲಿ ಅಮಾವಾಸ್ಯೆ ಆಚರಿಸಲಾಗುತ್ತದೆ.

ಸಾಂಪ್ರದಾಯಕವಾಗಿ ನಡೆದುಕೊಂಡು ಬಂದ ಎಳ್ಳಮಾವಾಸ್ಯೆಯ ದಿನ ಬೆಳೆ ನೀಡಿದ ಭೂತಾಯಿಗೆ ನೈವೇದ್ಯ ನೀಡಿದ ರೈತರು ವಿಶೇಷವಾಗಿ ಹಬ್ಬ ಆಚರಿಸಿದರು.

ಅಂದ್ಹಾಗೆ ಯಾದಗಿರಿ ತಾಲೂಕಿನ ಮುದ್ನಾಳ ಗ್ರಾಮದ ಚಂದಮ್ಮ ಹಾಗೂ ಹಣಮಂತ ಅವರ ಹೊಲದಲ್ಲಿ ಎಳ್ಳಮಾವಾಸ್ಯೆಯ ಚರಗ ಚೆಲ್ಲುವ ಕಾರ್ಯಕ್ರಮದಲ್ಲಿ ರೈತರು ಸಂಭ್ರಮದಿಂದ ಪಾಲ್ಗೊಂಡರು.

ಬೆಳೆಗಳನ್ನು ಒಂದು ಕಡೆ ಜೋಡಿಸಿ ಬೆಳೆಗೆ ಸೀರೆ ತೊಡಿಸಿ ಕಲ್ಲುಗಳಿಂದ ಪಾಂಡವರನ್ನು ನಿರ್ಮಿಸಿ ಪೂಜೆ ಸಲ್ಲಿಸಿದರು. ಬಳಿಕ

ಎಳ್ಳು ಬೆಲ್ಲ,ಹೋಳಿಗೆ ಸೇರಿದಂತೆ ಎಲ್ಲಾ ದವಸ ಧಾನ್ಯಗಳಿಂದ ತಯಾರಿಸಿದ ಆಹಾರ ಪದಾರ್ಥವನ್ನು ಚರಗ ಚೆಲ್ಲುವ ಮೂಲಕ ಭೂಮಿ ತಾಯಿಗೆ ಪ್ರಸಾದ ನೀಡಿ ತಾವು ಕೂಡ ಹೊಲದಲ್ಲೇ ಕುಟುಂಬಸ್ಥರು ಎಲ್ಲಾ ಕುಳಿತು ಭರ್ಜರಿ ಭೋಜನ ಸವಿದರು.

-----

ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ

Edited By : Manjunath H D
PublicNext

PublicNext

02/01/2022 08:34 pm

Cinque Terre

168.52 K

Cinque Terre

0