ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂವರ ಬರ್ಬರ ಕೊಲೆ : ಕೃತ್ಯದ ಹಿಂದಿನ ಆ ಕೈ ಯಾವುದು?...

ರಾಯಚೂರು : ನವವಿವಾಹಿತೆ ಸೇರಿದಂತೆ ಮೂವರನ್ನು ರಾತ್ರೋರಾತ್ರಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಂಗಳವಾರ ರಾತ್ರಿ ರಾಯಚೂರು ಹೊರವಲಯದ ಯರಮರಸ್ ಕ್ಯಾಂಪ್ ನಲ್ಲಿ ಸಂಭವಿಸಿದೆ. ಇನ್ನು ಈ ಘನಘೋರ ಕೃತ್ಯ ಎಸಗಿದ್ದು ಮನೆ ಅಳಿಯನೇ ಎಂಬುವುದು ಶಾಕಿಂಗ್ ಸಂಗತಿ.

ಹೌದು ವೈಷ್ಣವಿ (25) ಮತ್ತು ಇವರ ಸಹೋದರಿ ಆರತಿ (16), ತಾಯಿ ಸಂತೋಪಿ (45) ಕೊಲೆಯಾದ ದುರ್ದೈವಿಗಳು. 6 ತಿಂಗಳ ಹಿಂದೆ ಸಾಯಿ ಎಂಬ ಯುವಕನೊಂದಿಗೆ ವೈಷ್ಣವಿ ಮದುವೆ ಆಗಿತ್ತು. ನಿನ್ನೆ (ಮಂಗಳವಾರ) ರಾತ್ರಿ ಅತ್ತೆ ಸಂತೋಪಿಯ ಮನೆಗೆ ಬಂದ ಅಳಿಯ ಸಾಯಿ, ತನ್ನ ಪತ್ನಿ, ಅತ್ತೆ, ನಾದಿನಿಯನ್ನ ಕೊಂದು ಪರಾರಿಯಾಗಿದ್ದಾನೆ.

ಮದುವೆ ಬಳಿಕ ಸಾಯಿ ಹಾಗೂ ವೈಷ್ಣವಿ ಮಧ್ಯೆ ಕೌಟುಂಬಿಕ ಕಲಹ ಶುರುವಾಗಿತ್ತು. ಪತ್ನಿ ವೈಷ್ಣವಿ ತವರು ಮನೆ ಸೇರಿದ್ದಳು. ಇದೇ ವಿಚಾರಕ್ಕೆ ಅತ್ತೆ ಮನೆಗೆ ಬಂದಿದ್ದ ಸಾಯಿ ಜಗಳ ತೆಗೆದಿದು ಕೋಪದಲ್ಲಿ ಪತ್ನಿ, ಅತ್ತೆ, ನಾದಿನಿಯನ್ನ ಕೊಲೆ ಮಾಡಿ ಪರಾರಿಯಾಗಿದ್ದಾನೆ. ರಾಯಚೂರು ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Edited By : Nirmala Aralikatti
PublicNext

PublicNext

29/09/2021 01:03 pm

Cinque Terre

63.21 K

Cinque Terre

1

ಸಂಬಂಧಿತ ಸುದ್ದಿ