ಭೋಪಾಲ್: ರೈಲಿನಲ್ಲಿ ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರಾದ ಸಿದ್ಧಾರ್ಥ್ ಕುಶ್ವಾಹಾ ಮತ್ತು ಸುನೀಲ್ ಸರಾಫ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸಂತ್ರಸ್ತೆ ನೀಡಿದ ದೂರಿನ ಪ್ರಕಾರ, ಶಾಸಕರಾದ ಸಿದ್ಧಾರ್ಥ್ ಕುಶ್ವಾಹಾ ಮತ್ತು ಸುನೀಲ್ ಸರಾಫ್ ತಮ್ಮೊಂದಿಗೆ ಊಟ ಮಾಡುವಂತೆ ಮಹಿಳೆಗೆ ಒತ್ತಾಯಿಸಿದರು. ಇದಕ್ಕೆ ನಿರಾಕರಿಸಿದ್ದಕ್ಕೆ ಶಾಸಕರಲ್ಲಿ ಓರ್ವ ಕೈ ಹಿಡಿದರು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.
ಈ ಆರೋಪವನ್ನು ತಳ್ಳಿಹಾಕಿರುವ ಕುಶ್ವಾಹಾ ಅವರು, ತಮ್ಮ ಸೀಟ್ ಅನ್ನು ಮಾತ್ರ ಮಹಿಳೆಯೊಂದಿಗೆ ವಿನಿಮಯ ಮಾಡಿಕೊಂಡಿದ್ದೇವೆ. ಅವರೊಂದಿಗೆ ಯಾವುದೇ ಸಂಭಾಷಣೆ ನಡೆಸಲಿಲ್ಲ ಎಂದು ಹೇಳಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
PublicNext
07/10/2022 07:09 pm