ಡೆಹ್ರಾಡೂನ್: ಉತ್ತರಾಖಂಡ್ನ ಅಂಕಿತಾ ಭಂಡಾರಿ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಬೆನ್ನ ಹಿಂದೆ ಬಿದ್ದಿದ್ದ ಪೊಲೀಸರಿಗೆ ಸ್ಫೋಟಕ ಸತ್ಯ ಬಯಲಾಗಿದೆ. ತನಿಖೆ ವೇಳೆ ಅಂಕಿತಾ ಭಂಡಾರಿ ಹತ್ಯೆಗೆ ಅಸಲಿ ಕಾರಣ ಹೊರ ಬಿದ್ದಿದೆ. ಅದೊಂದು ಸೇವೆ ಮಾಡಲು ಒಪ್ಪದಿದ್ದಕ್ಕೆ ದುಷ್ಕರ್ಮಿಗಳು 19 ವರ್ಷದ ಹುಡುಗಿಯ ನೆತ್ತರು ಹರಿಸಿದ್ದಾರೆ.
ರಿಷಿಕೇಶ್‌ನಲ್ಲಿರುವ ವಂತರಾ ರೆಸಾರ್ಟ್‌ನಲ್ಲಿ ಸ್ವಾಗತಗಾರ್ತಿಯಾಗಿ ಕೆಲಸ ಮಾಡುತ್ತಿದ್ದ ಅಂಕಿತಾ ಭಂಡಾರಿ ಕಳೆದ ಸೆ. ಸೆಪ್ಟೆಂಬರ್ 18ರಿಂದ ನಾಪತ್ತೆಯಾಗಿದ್ದರು. ಬಳಿಕ ಆಕೆಯ ಶವ ಸೆಪ್ಟೆಂಬರ್ 22ರಂದು ಚಿಲ ಶಕ್ತಿ ನಾಲೆಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿಜೆಪಿ ನಾಯಕ ವಿನೋದ್ ಆರ್ಯರ ಪುತ್ರ, ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಹಾಗೂ ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್, ಅಸಿಸ್ಟೆಂಟ್ ಮ್ಯಾನೇಜರ್ ಅಂಕಿತ್ ಗುಪ್ತಾರನ್ನ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಪೊಲೀಸರು ಮೂವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ಮೂವರನ್ನು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಅಂಕಿತ ತನ್ನ ಸಹದ್ಯೋಗಿಗಳಿಗೆ ಕಳುಹಿಸಿದ ಸಂದೇಶ ವಾಸ್ತವ ಅಂಶವನ್ನು ಪುಷ್ಟಿ ಕರಿಸುತ್ತೆ ಎನ್ನಲಾಗಿದೆ. ಅಲ್ಲದೆ ರೆಸಾರ್ಟ್ ನಲ್ಲಿ ಏನೆಲ್ಲಾ ನಡೆಯುತ್ತಿತ್ತು ಎಂಬುದರ ಕುರಿತು ಅಂಕಿತಾ ತನ್ನ ಸಹದ್ಯೋಗಿಗಳಿಗೆ ತಿಳಿಸಿದ್ದಾಳೆ. ಅಲ್ಲದೆ ನಾನು ಬಡವಳಾಗಿರಬಹುದು ಆದರೆ ನನ್ನನ್ನು 10 ಸಾವಿರಕ್ಕೆ ಮಾರಿಕೊಳ್ಳುವುದಿಲ್ಲ ಎಂದು ಸಹದ್ಯೋಗಿಗಳಿಗೆ ಕಳುಹಿಸಿದ ಸಂದೇಶದಲ್ಲಿ ಗೊತ್ತಾಗಿದೆ.ಸಸಸ
ಅಂಕಿತ ನಾಪತ್ತೆಯಾಗುವ ದಿನ ರೆಸಾರ್ಟ್ ನಿರ್ವಾಹಕ ಪುಲ್ಕಿತ್ ಆರ್ಯ, ಮ್ಯಾನೇಜರ್ ಅಂಕಿತ್ ಅಲಿಯಾಸ್ ಪುಲ್ಕಿತ್ ಗುಪ್ತಾ, ಮ್ಯಾನೇಜರ್ ಸೌರಭ್ ಭಾಸ್ಕರ್ ಅವರೊಂದಿಗೆ ರಿಷಿಕೇಶಕ್ಕೆ ತೆರಳಿದ್ದರು. ಅಲ್ಲಿಂದ ಹಿಂತಿರುಗುವ ವೇಳೆ ಚಿಲ ಶಕ್ತಿ ನಾಲೆ ಬಳಿ ಮೂವರು ಮದ್ಯ ಸೇವಿಸಲು ಕಾರನ್ನು ನಿಲ್ಲಿಸಿದ್ದಾರೆ. ಈ ವೇಳೆ ರೆಸಾರ್ಟ್ ಮ್ಯಾನೇಜರ್ ಅಂಕಿತಾಳನ್ನು ರೆಸಾರ್ಟಿಗೆ ಬರುವ ಗ್ರಾಹಕರಿಗೆ ಒಳ್ಳೆಯ ಸೇವೆ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ. ಆದರೆ ಇದನ್ನು ಅಂಕಿತ ಖಡಾ ಖಂಡಿತವಾಗಿ ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮೂವರು ಸೇರಿ ಅಂಕಿತಾಳನ್ನು ನಾಲೆಗೆ ದೂಡಿ ಕೊಲೆಗೈದಿದ್ದಾರೆ ಎನ್ನಲಾಗಿದೆ.
PublicNext
25/09/2022 04:17 pm