ಉತ್ತರ ಪ್ರದೇಶ : ಭಾವಿ ಪತಿಯ ಮುಂದೆ ಯುವತಿಯೋರ್ವಳಿಗೆ ಪುಂಡರು ಕಿರುಕುಳ ನೀಡಿದ ಘಟನೆ ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದಿದೆ.ಯುವತಿಯನ್ನು ಆರೋಪಿಗಳು ಒತ್ತಾಯಪೂರ್ವಕವಾಗಿ ಎಳೆದಾಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇದೇ ವೇಳೆ ಆಕೆಯನ್ನು ಬಿಡುವಂತೆ ಆಕೆಯ ಭಾವಿ ಪತಿ ಆರೋಪಿಗಳ ಕಾಳು ಹಿಡಿದು ಪರಿಪರಿಯಾಗಿ ಬೇಡುತ್ತಿರುವುದನ್ನು ಕಾಣಬಹುದು.
ಇನ್ನು ಭಾವಿ ಪತಿ ಇಷ್ಟೊಂದು ಬೇಡಿಕೊಂಡರು ಕಿವಿಗೊಡದೆ ದೌರ್ಜನ್ಯ ಮುಂದುವರೆಸಿದ್ದಾನೆ. ಇದನ್ನು ಮತ್ತೊಬ್ಬ ಆರೋಪಿ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
PublicNext
23/09/2022 09:15 pm