ಕಾನ್ಪುರ: ದೇಶಾದ್ಯಂತ ನಾಯಿ ಕಚ್ಚಿದ ಘಟನೆಗಳ ವರದಿಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಕಾನ್ಪುರದಲ್ಲಿ ನಾಯಿಯೊಂದು ಹಸುವಿನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿರುವ ಭಯಾನಕ ವಿಡಿಯೋವೊಂದು ವೈರಲ್ ಆಗಿದೆ.ಸದ್ಯ ಶ್ವಾನಗಳಲ್ಲೇ ಅಪಾಯಕಾರಿ ಎಂದು ಕರೆಯಲಾಗುವ ಪಿಟ್ ಬುಲ್ ತಳಿಯ ಶ್ವಾನವೊಂದು ಹಸುವಿನ ಮೇಲೆ ದಾಳಿ ಮಾಡಿರುವ ಘಟನೆ ಉತ್ತರಪ್ರದೇಶದ ಕಾನ್ಪುರ ಬಳಿಯ ಸರ್ಸಿಯ ಘಾಟ್ ನಲ್ಲಿ ನಡೆದಿದೆ.
ವಿಡಿಯೋದಲ್ಲಿ ಕಾಣಿಸುವಂತೆ ಸರ್ಸಿಯ ಘಾಟ್ ನಲ್ಲಿ ಕೆಸರು ನೀರು ತುಂಬಿದ್ದು, ಅಲ್ಲೇ ಈ ಪಿಟ್ ಬುಲ್ ಶ್ವಾನ ದಾಳಿ ಮಾಡಿದೆ.
ಹಸುವಿನ ದವಡೆಯನ್ನು ಕಚ್ಚಿ ಹಿಡಿದುಕೊಂಡಿದೆ. ಈ ವೇಳೆ ಅಲ್ಲೇ ಇದ್ದ ಒಬ್ಬರು ನಾಯಿ ಬಾಯಿಯಿಂದ ಹಸುವನ್ನು ಬಿಡಿಸಲು ಯತ್ನಿಸುತ್ತಾರೆ. ಆದರೆ ಶ್ವಾನ ತನ್ನ ಹಿಡಿತವನ್ನು ಬಿಡಲು ಸಿದ್ಧವಿಲ್ಲ. ಅಲ್ಲೇ ಇದ್ದ ಇನ್ನಿಬ್ಬರು ದೊಣ್ಣೆ ಕೋಲುಗಳನ್ನು ತೆಗೆದುಕೊಂಡು ಶ್ವಾನವನ್ನು ಹೊಡೆದರೂ ಶ್ವಾನ ಹಸುವನ್ನು ಬಿಟ್ಟಿಲ್ಲ. ಕೊನೆಗೆ ಅಲ್ಲೇ ಇದ್ದವರು ಶ್ವಾನವನ್ನು ನೀರಿನಲ್ಲಿ ಮುಳುಗಿಸಿದ್ದಾರೆ. ಈ ವೇಳೆ ಶ್ವಾನ ಹಸುವನ್ನು ಬಿಟ್ಟಿದೆ.
ಈ ವಿಡಿಯೋ ನೋಡಿದ ಅನೇಕರು ಆಘಾತಗೊಂಡಿದ್ದಾರೆ. ಈ ಪಿಟ್ ಬುಲ್ ತಳಿಯ ನಾಯಿಯೂ ಬಹಳ ಅಪಾಯಕಾರಿಯಾಗಿದ್ದು, ಸಿಟ್ಟಿಗೆದ್ದರೆ ಸಾಕಿದ ಮಾಲೀಕನ ಮೇಲೆ ದಾಳಿ ಮಾಡಲು ಕೂಡ ಅದು ಹೇಸುವುದಿಲ್ಲ. ಇದನ್ನು ಸಾಕುವುದಕ್ಕೆ ಅನೇಕ ದೇಶಗಳಲ್ಲಿ ನಿಷೇಧ ಹೇರಲಾಗಿದೆ.
PublicNext
23/09/2022 07:55 pm