ಜೋಧಪುರ: ಕಾರಿಗೆ ಶ್ವಾನವನ್ನು ಕಟ್ಟಿದ ಕ್ರೂರ ವೈದ್ಯನೊಬ್ಬ ಊರೆಲ್ಲ ಎಳೆದಾಡಿದ್ದಾನೆ. ಈ ಘಟನೆ ರಾಜಸ್ಥಾನದ ಜೋಧಪುರದಲ್ಲಿ ನಡೆದಿದ್ದು ಎನ್ನಲಾಗಿದೆ.
ಇದೇ ಮಾರ್ಗದಲ್ಲಿ ಹೋಗುತ್ತಿದ್ದ ಬೈಕ್ ಸವಾರನೋರ್ವ ಇದರ ವಿಡಿಯೋ ಮಾಡಿ ನಂತರ ಆ ಕಾರನ್ನು ತಡೆದಿದ್ದಾನೆ. ನಂತರ ಡಾಗ್ ಹೋಮ್ ಫೌಂಡೇಶನ್‌ಗೆ ಮಾಹಿತಿ ನೀಡಲಾಗಿದೆ. ಕೂಡಲೇ ಆಂಬ್ಯುಲೆನ್ಸ್ ಸಮೇತ ಸ್ಥಳಕ್ಕೆ ಬಂದ ಸಿಬ್ಬಂದಿ ನಿತ್ರಾಣಗೊಂಡಿದ್ದ ನಾಯಿಯನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಾಯಿಯನ್ನು ಊರ ತುಂಬ ಎಳೆದಾಡಿದ ವೈದ್ಯನ ಮೇಲೆ ಎಫ್‌ಐಆರ್ ದಾಖಲಾಗಿದೆ.
PublicNext
19/09/2022 12:50 pm