ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲೋನ್‌ ರಿಕವರಿ ವೇಳೆ ಗರ್ಭಿಣಿಗೆ ಟ್ರ್ಯಾಕ್ಟರ್ ಗುದ್ದಿಸಿ ಸಾಯಿಸಿದ ಫೈನಾನ್ಸ್ ಸಿಬ್ಬಂದಿ; ಕ್ಷಮೆ ಕೋರಿದ ಮಹೀಂದ್ರಾ ಫೈನಾನ್ಸ್

ರಾಂಚಿ: ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಹಿಂಪಡೆಯಲು ರೈತನ ಮನೆಗೆ ತೆರಳಿದ ಫೈನಾನ್ಸ್ ಕಂಪನಿ ಅಧಿಕಾರಿಗಳು ರೈತನ ಗರ್ಭಿಣಿ ಮಗಳನ್ನು ಟ್ರ್ಯಾಕ್ಟರ್ ಮೂಲಕ ಗುದ್ದಿ ಸಾಯಿಸಿದ ಘಟನೆ ನಡೆದಿದೆ.

ಈ ಘಟನೆ ಹಜಾರಿಬಾಗ್ ಜಿಲ್ಲೆಯ ಇಚ್ಚಾಕ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಖಾಸಗಿ ಫೈನಾನ್ಸ್‌ವೊಂದರಲ್ಲಿ ಬಡ ಕುಟುಂಬವೊಂದು ಕೃಷಿ ಮಾಡಲು ಸಾಲ ಪಡೆದುಕೊಂಡಿತ್ತು. ಆದರೆ ಸಕಾಲದಲ್ಲಿ ಸಾಲ ತೀರಿಸಲು ಆಗಿರಲಿಲ್ಲ ಸಾಲ ವಸೂಲಾತಿಗೆಂದು ರೈತನ ಮನೆಗೆ ಖಾಸಗಿ ಫೈನಾನ್ಸ್ ಕಂಪನಿಯ ಏಜೆಂಟರು ಬಂದಿದ್ದಾರೆ.

ಈ ವೇಳೆ ರೈತ ಹಾಗೂ ಏಜೆಂಟ್​ ನಡುವೆ ವಾಗ್ವಾದ ನಡೆದಿದೆ. ಕೋಪಗೊಂಡ ಏಜೆಂಟ್ ರೈತನ​ ಮನೆಯಲ್ಲಿದ್ದ ಟ್ರ್ಯಾಕ್ಟರ್ ವಶಕ್ಕೆ ಪಡೆಯಲು ಮುಂದಾಗಿದ್ದಾನೆ. ಈ ವೇಳೆ ರೈತನ ಮೂರು ತಿಂಗಳ ಗರ್ಭಿಣಿ ಮಗಳು ಟ್ರ್ಯಾಕ್ಟರ್ ಮುಂದೆ ಅಡ್ಡ ಬಂದಿದ್ದಾಳೆ. ಆದರೆ ಆ ಏಜೆಂಟ್​ ಆಕೆಯನ್ನೂ ಲೆಕ್ಕಿಸದೆ ಮೇಲೆಯೇ ಟ್ರ್ಯಾಕ್ಟರ್ ಹರಿಸಿದ್ದಾನೆ. ಇದರಿಂದ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಫೈನಾನ್ಸ್ ಕಂಪನಿಯ ರಿಕವರಿ ಏಜೆಂಟ್ ಹಾಗೂ ಮ್ಯಾನೇಜರ್ ಸೇರಿದಂತೆ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹೀಂದ್ರಾ ಫೈನಾನ್ಸ್‌ ತನಿಖೆ ನಡೆಸುವುದಾಗಿ ಹೇಳಿದ್ದು, ಥರ್ಡ್‌ ಪಾರ್ಟಿ ಲೋನ್‌ ರಿಕವರಿ ಅಭ್ಯಾಸದ ಬಗ್ಗೆ ಗಮನ ನೀಡುವುದಾಗಿ ಹೇಳಿದೆ.

Edited By : Vijay Kumar
PublicNext

PublicNext

18/09/2022 07:16 pm

Cinque Terre

34.13 K

Cinque Terre

3