ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ತರಕಾರಿ ಮೇಲೆ ಮೂತ್ರ ವಿಸರ್ಜಿಸಿದ ವ್ಯಾಪಾರಿ.!

ಲಕ್ನೋ: ಪಾನಿಪುರಿ ವ್ಯಾಪಾರಿಯೊಬ್ಬ ಜಗ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿ ಬಳಿಕ ಅದನ್ನು ಪಾನಿಯಲ್ಲಿ ಹಾಕಿದ್ದ. ಈ ಬೆನ್ನಲ್ಲೇ ಇಂದ್ದಂತೆ ಕೃತ್ಯವನ್ನು ತರಕಾರಿ ವ್ಯಾಪಾರಿ ಎಸಗಿದ್ದಾನೆ. ಈ ವಿಡಿಯೋ ವೈರಲ್ ಆಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಷರೀಫ್ ಬಂಧಿತ ಆರೋಪಿ. ಉತ್ತರ ಪ್ರದೇಶದ ಬರೇಲಿಯ ಇಜ್ಜತ್‌ನಗರ ಪ್ರದೇಶದಲ್ಲಿ ಘಟನೆ ನಡೆದಿದೆ. ಸ್ಥಳೀಯರಾದ ದುರ್ಗೇಶ್ ಗುಪ್ತಾ ಅವರು ತಮ್ಮ ಕಾರಿನಲ್ಲಿ ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋಗುತ್ತಿದ್ದರು. ಇದೇ ವೇಳೆ 55 ವರ್ಷದ ತರಕಾರಿ ವ್ಯಾಪಾರಿ ಕಾಲೋನಿಯ ರಸ್ತೆ ಬದಿಯಲ್ಲಿ ತರಕಾರಿ ಗಾಡಿ ಎಳೆಯುತ್ತಿದ್ದು, ಕೈಗಾಡಿಯ ಕೆಳಗೆ ಇಟ್ಟಿದ್ದ ತರಕಾರಿಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದುದನ್ನು ಗಮನಿಸಿದ್ದಾರೆ. ಅಲ್ಲದೇ ಈ ವ್ಯಾಪಾರಿ ತರಕಾರಿಗಳ ಮೇಲೆ ಮೂತ್ರ ವಿಸರ್ಜಿಸುವುದನ್ನು ಸಾಕ್ಷಿಗಾಗಿ ವಿಡಿಯೋ ಮಾಡಿಕೊಂಡಿದ್ದಾರೆ.

ತರಕಾರಿಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ಷರೀಫ್‌ಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ವಿರುದ್ಧ ಬರೇಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By : Vijay Kumar
PublicNext

PublicNext

18/09/2022 05:37 pm

Cinque Terre

106.12 K

Cinque Terre

8

ಸಂಬಂಧಿತ ಸುದ್ದಿ