ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟೋಲ್ ಪ್ಲಾಜಾ ಮುಂದೆ ಜಡೆ ಹಿಡಿದು ಇಬ್ಬರು ಮಹಿಳೆಯರ ಫೈಟ್

ಮುಂಬೈ: ಇಬ್ಬರು ಮಹಿಳೆಯರು ನಡುರಸ್ತೆಯಲ್ಲಿ ಪರಸ್ಪರ ಹೊಡೆದಾಡಿಕೊಂಡ ನಾಚಿಕೆಗೇಡಿನ ಘಟನೆ ಮಹಾರಾಷ್ಟ್ರದ ನಾಸಿಕ್‌ ಸಮೀಪದ ಪಿಂಪಲಗಾಂವ್ ಟೋಲ್ ಪ್ಲಾಜಾದ ಮುಂದೆ ನಡೆದಿದೆ.

ನಿನ್ನೆ ಈ ಘಟನೆ ನಡೆದಿದ್ದು, ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ ಆಗಿದೆ. ಇನ್ನು ಈ ದೃಶ್ಯವನ್ನು ಸೆರೆ ಹಿಡಿದ ನೆಟ್ಟಿಗರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋ ಸದ್ಯ ವೈರಲ್ ಆಗಿದೆ.

ವಿಡಿಯೋದಲ್ಲಿ ಕಾಣಿಸುವಂತೆ ಪಿಂಪಲಗಾಂವ್ ಟೋಲ್ ಬೂತ್‌ನ ಉದ್ಯೋಗಿಯಾಗಿರುವ ಮಹಿಳೆ ಹಾಗೂ ಮಹಿಳಾ ಪ್ರಯಾಣಿಕರೊಬ್ಬರ ಮಧ್ಯೆ ಹೊಡೆದಾಟ ನಡೆದಿದೆ. ಟೋಲ್‌ನಲ್ಲಿ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಈ ಗಲಾಟೆ ನಡೆದಿದೆ ಎನ್ನಲಾಗಿದೆ.

Edited By : Vijay Kumar
PublicNext

PublicNext

15/09/2022 08:49 pm

Cinque Terre

92.21 K

Cinque Terre

1