ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಕ್ಕಳ ಕಳ್ಳರೆಂದು ಸಾಧುಗಳಿಗೆ ಥಳಿತ! ವಿಡಿಯೋ ವೈರಲ್

ಮುಂಬೈ: ಮಕ್ಕಳ ಕಳ್ಳರೆಂದು ಭಾವಿಸಿ ತಂಡವೊಂದು ನಾಲ್ವರು ಸಾಧುಗಳಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಲವನ ಗ್ರಾಮದಲ್ಲಿ ನಡೆದಿದೆ.ಸದ್ಯ ಸಾಧುಗಳಿಗೆ ಥಳಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಜಿಲ್ಲೆಯಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿಗಳು ಹಬ್ಬಿತ್ತು ಅದಕ್ಕೆ ಸರಿಯಾಗಿ ನಾಲ್ವರು ಸಾಧುಗಳು ಕಾಣಿಸಿಕೊಂಡಿದ್ದಾರೆ ಇದರಿಂದ ಅನುಮಾನಗೊಂಡ ಜನರ ಗುಂಪು ದೊಣ್ಣೆ, ಕೋಲಿನಿಂದ ಸಾಧುಗಳ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ.

ಈ ಘಟನೆಯ ಬಗ್ಗೆ ಈವರೆಗೂ ಯಾವುದೇ ದೂರು ದಾಖಲಾಗಿಲ್ಲ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ ಘಟನೆಯನ್ನು ಖಂಡಿಸಿದ್ದಾರೆ ಮತ್ತು ಸಾಧುಗಳ ಮೇಲಿನ ಇಂತಹ “ದುಷ್ಕೃತ್ಯ” ವನ್ನು ಸರ್ಕಾರವು ಸಹಿಸುವುದಿಲ್ಲ ಎಂದಿರುವ ಶಾಸಕರು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

14/09/2022 02:04 pm

Cinque Terre

101.31 K

Cinque Terre

10

ಸಂಬಂಧಿತ ಸುದ್ದಿ