ರಾಂಚಿ: ಆರು ವರ್ಷದ ಬಾಲಕಿಯ ಮೇಲೆ 22 ವರ್ಷದ ಯುವಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಜಾರ್ಖಂಡ್ ರಾಜಧಾನಿ ರಾಂಚಿ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಯು ಅಪರಾಧ ಎಸಗುವ ಮೊದಲು ಸಂತ್ರಸ್ತೆಗೆ ಚಾಕೊಲೇಟ್‌ಗಳ ಆಮಿಷ ಒಡ್ಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. "ನಮ್ಕುಮ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ" ಎಂದು ರಾಂಚಿ ಗ್ರಾಮೀಣ ಭಾಗದ ಪೊಲೀಸ್ ವರಿಷ್ಠಾಧಿಕಾರಿ ನೌಶಾದ್ ಆಲಂ ತಿಳಿಸಿದ್ದಾರೆ.
PublicNext
13/09/2022 08:48 am