ಚಿಕ್ಕಬಳ್ಳಾಪುರ: ಆಕೆ ಇನ್ನು ಬಾಳಿ ಬದುಕಬೇಕಾದಾಕೆ ಆದ್ರೆ ರೀಲ್ಸ್ ಗೀಳಿಗೆ ಬಿದ್ದು ಯುವತಿಯೊಬ್ಬಳು ಕೆರೆ ಪಾಲಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗಂಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೌದು ಶಿಡ್ಲಘಟ್ಟ ತಾಲೂಕಿನ ಗಾಜಿಲುವಾರುಪಲ್ಲಿ ಗ್ರಾಮದ ಎಂಎ ಪದವೀಧರೆ ಅಮೃತಾ (22) ಮೃತ ಯುವತಿ. ಜಂಬಿಗೆಮರದಹಳ್ಳಿಯ ನೆಂಟರ ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಮೃತಾ, ಗಂಗಾನಹಳ್ಳಿ ಕೆರೆ ಕೋಡಿ ಹರಿಯುತ್ತಿರುವ ವಿಚಾರ ತಿಳಿದು ಸ್ನೇಹಿತೆ ಅಕ್ಷತಾ ಜೊತೆಗೆ ಅಲ್ಲಿಗೆ ಹೋಗಿದ್ದಳು.
ಸ್ನೇಹಿತೆಗೆ ವಿಡಿಯೋ ಮಾಡಲು ಹೇಳಿ ಕೆರೆಯ ಅಂಚಿಗೆ ಹೋಗಿದ್ದಾಳೆ. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಅಮೃತಾ ಸಾವನ್ನಪ್ಪಿದ್ದಾಳೆ. ಕೆರೆಯ ನೀರಲ್ಲಿ ಅಮೃತ ಉರುಳಿದ ಘಟನೆಯನ್ನ ಸ್ನೇಹಿತೆ ಅಕ್ಷತಾ ತೋಟದಲ್ಲಿದ್ದ ಗ್ರಾಮಸ್ಥರಿಗೆ ತಿಳಿಸಿದ್ದಾಳೆ. ನಂತರ ಸ್ಥಳೀಯರು ಆಕೆಯ ಮೃತದೇಹವನ್ನ ಕೆರೆಯಿಂದ ಮೇಲಕ್ಕೆ ಎತ್ತಿದ್ದಾರೆ.
PublicNext
11/09/2022 09:05 pm