ಕಾರವಾರ: ತಾಲೂಕಿನ ಗೋಪಿಶಿಟ್ಟಾ ಗ್ರಾಮದ ಬರ್ನವಾಡ ಎಂಬಲ್ಲಿ ಮನೆಯಲ್ಲೇ ನಾಡ ಬಂದೂಕು ತಯಾರಿಸುತ್ತಿದ್ದ ವ್ಯಕ್ತಿಯನ್ನು ಇಂದು ಜಿಲ್ಲಾ ಕ್ರೈಬ್ರಾಂಚ್ ಪೊಲೀಸ ತಂಡ ಬಂದೂಕು ಸಹಿತ ಬಂಧಿಸಿದೆ.
ವಿನಾಯಕ ಆಚಾರಿ (48) ಬಂಧಿತ ಆರೋಪಿ. ನಾಡ ಬಂದೂಕು ತಯಾರಿ ಹಾಗೂ ಮಾರಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ವಿನಾಯಕ ಆಚಾರಿಯನ್ನು ಬಂದೂಕು ಸಹಿತ ಬಂಧಿಸಿದ್ದಾರೆ. ಈತ ಒಂಟಿ ನಳಿಕೆಯ ನಾಡ ಬಂದೂಕು ತಯಾರಿಸುತ್ತಿದ್ದ. ಮನೆಯ ಹಿಂದೆ ನಾಡ ಬಂದೂಕು ತಯಾರಿಸುವ ಸಾಮಾಗ್ರಿ ಇಟ್ಟು ಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಕ್ರೈಮ್ ಬ್ರಾಂಚ್ ಪೊಲೀಸ್ ಇನ್ಸ್ಪೆಪೆಕ್ಟರ್ ಪ್ರೇಮನಗೌಡ ಪಾಟೀಲ್ ,ಚಿತ್ತಾಕುಲಾ ಪಿಎಸ್ ಐ ವಿಶ್ವನಾಥ ಗಂಗೊಳ್ಳಿ ಅವರ ತಂಡ ಇಂದು ದಾಳಿ ಮಾಡಿ ಆರೋಪಿಯನ್ನು ಬಂಧಿಸಿ,ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಬಂದೂಕು ತಯಾರಿಸುವ ಕಟಿಂಗ್ ಮಿಷನ್ ಇತರೆ ಸಮಾಗ್ರಿ ಸಿಕ್ಕಿವೆ. ಪೋಲಿಸರ ದಾಳಿ ಹಾಗೂ ಯಶಸ್ವಿ ಕಾರ್ಯಾಚರಣೆಯನ್ನು ಎಸ್ಪಿ ಸುಮನ್ ಪನ್ನೇಕರ್ ಮೆಚ್ಚಿದ್ದಾರೆ.
PublicNext
07/09/2022 11:02 pm