ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಸಿ ಕ್ಯಾಮೆರಾದ ಕಣ್ಣಿಗೆ ಸ್ಪ್ರೇ ಎರಚಿ ₹ 11 ಲಕ್ಷ ನಗದು ದರೋಡೆ; ಕಳ್ಳನ ಕರಾಮತ್ತು ಹೇಗಿತ್ತು ಗೊತ್ತಾ?

ಮುಂಬೈ: ದರೋಡೆಕೋರನೊಬ್ಬ ಸಿಸಿ ಕ್ಯಾಮೆರಾಕ್ಕೆ ಕಪ್ಪು ಸ್ಪ್ರೇ ಎರಚಿ, ಎಟಿಎಂ ಯಂತ್ರವನ್ನು ಸ್ಫೋಟಿಸಿ ₹ 11 ಲಕ್ಷ ದೋಚಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಸತಾರಾದ ನಾಗ್ತಾನೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದರೋಡೆಕೋರರು ಸ್ಫೋಟಕ್ಕೆ ಜೆಲಾಟಿನ್‌ನಂತಹ ಸ್ಫೋಟಕ ವಸ್ತುಗಳನ್ನು ಬಳಸಿದ್ದಾನೆ ಎನ್ನಲಾಗ್ತಿದೆ.

ದರೋಡೆಕೋರ ಕಪ್ಪು ಸ್ಪ್ರೇಎರಚಿದ್ದರಿಂದ ಸಿಸಿ ಕ್ಯಾಮೆರಾದಲ್ಲಿ ಚಿತ್ರವನ್ನು ಸೆರೆಹಿಡಿಯಲು ಸಾಧ್ಯವಾಗಲಿಲ್ಲ. ಬ್ಯಾಂಕ್ ಆಫ್ ಮಹಾರಾಷ್ಟ್ರದ ಎರಡು ಎಟಿಎಂ ಯಂತ್ರಗಳಿದ್ದು, ಅವುಗಳಲ್ಲಿ ಒಂದು ಸ್ಫೋಟದ ರಭಸಕ್ಕೆ ಸಂಪೂರ್ಣ ನಾಶವಾಗಿದ್ದು ₹ 11 ಲಕ್ಷವನ್ನು ದರೋಡೆಕೋರರು ದೋಚಿದ್ದಾರೆ.

ಸ್ಫೋಟದ ಮೊದಲು ದಾಖಲಾಗಿರುವ ದೃಶ್ಯಾವಳಿಗಳ ಪ್ರಕಾರ, ಘಟನೆಯು ಬುಧವಾರ ಮುಂಜಾನೆ 2:30 ರ ಸುಮಾರಿಗೆ ನಡೆದಿದೆ ಎಂದು ತಿಳಿಸಲಾಗಿದೆ. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತಿದೆ.

Edited By : Abhishek Kamoji
PublicNext

PublicNext

07/09/2022 08:28 pm

Cinque Terre

104.18 K

Cinque Terre

1

ಸಂಬಂಧಿತ ಸುದ್ದಿ