ಕಾರವಾರ: ಯಲ್ಲಾಪುರ ಪಟ್ಟಣದ ನಾಯಕನಕೇರಿ ಯುವಕನೋರ್ವ ಲೋನ್ ಆ್ಯಪ್ ಮೂಲಕ ಪಡೆದಿದ್ದ 11 ಸಾವಿರ ರೂ. ಸಾಲಕ್ಕೆ ಕಂಪನಿಯವರ ಕಿರುಕುಳದಿಂದ 35 ಸಾವಿರ ರೂಪಾಯಿ ಭರಿಸಿದ್ದಾನೆ. ಇಷ್ಟು ಸಾಲದೆ 60 ಸಾವಿರ ರೂ.ಗೂ ಹೆಚ್ಚು ಹಣವನ್ನು ನೀಡುವಂತೆ ಪೀಡಿಸಿದ್ದ ಲೋನ್ ಆ್ಯಪ್‌ನವರ ಕಿರುಕುಳಕ್ಕೆ ಬೇಸತ್ತು ಕೊನೆಗೆ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರಿಗೆ ಇದೀಗ ದೂರು ಸಲ್ಲಿಸಿದ್ದಾನೆ.
ದೂರು ಸಲ್ಲಿಸಿರುವ ಸ್ವೀಕೃತಿ ಹಾಗೂ ದೂರಿನ ಸ್ವರೂಪವನ್ನು ಸಾಲ ನೀಡುವ ಲೋನ್ ಆ್ಯಪ್ ಏಜೆಂಟರಿಗೆ ವಾಟ್ಸಾಪ್ ಮಾಡಿದ್ದು, ಅದಕ್ಕೆ ಪ್ರತಿಕ್ರಿಯಿಸಿರುವ ಲೋನ್ ಆ್ಯಪ್‌ನವರು, ತಾಕತ್ತಿದ್ದರೆ ಪೊಲೀಸರು ತಮ್ಮನ್ನು ಬಂಧಿಸುವಂತೆ ಸವಾಲು ಹಾಕಿದ್ದಾರೆ. ಇದರಿಂದಾಗಿ ನೊಂದ ಯುವಕ ಸಿಮ್ ಅನ್ನೇ ಧ್ವಂಸ ಮಾಡಿದ್ದಾನೆ.
PublicNext
07/09/2022 07:34 pm