ಕಾರವಾರ: ಯಾವುದೇ ದಾಖಲೆಗಳು ಬೇಡ ಎಂದು ಜಾಹೀರಾತು ನೀಡಿದ್ದ ಲೋನ್ ಆ್ಯಪ್‌ನಲ್ಲಿ ಸಾಲ ಪಡೆದಿದ್ದ ಯಲ್ಲಾಪುರ ಪಟ್ಟಣದ ವೃದ್ಧರೊಬ್ಬರ, ಆ್ಯಪ್ ಕೇಳಿದ್ದ ಎಲ್ಲ ಪರ್ಮಿಶನ್‌ಗೆ ಮೊಬೈಲ್‌ನಲ್ಲಿ ಅಲೋವ್ ನೀಡಿದ್ದಾರೆ. ಸದ್ಯ ಲೋನ್ ಆ್ಯಪ್ ವೃದ್ಧನ ಮೊಬೈಲ್ ಅನ್ನೇ ಹ್ಯಾಕ್ ಮಾಡಿ ಬೆದರಿಕೆ ಒಡ್ಡಿದೆ.
ಮೂರೂವರೆ ಸಾವಿರ ರೂ. ಸಾಲ ನೀಡಿದ್ದ ಕಂಪನಿ 15 ಸಾವಿರ ರೂ.ಗೂ ಹೆಚ್ಚು ಹಣವನ್ನು ವೃದ್ಧನಿಂದ ವಸೂಲಿ ಮಾಡಿದೆ. ಮತ್ತೆ ಮತ್ತೆ ಸಾಲ ತುಂಬಲು ದುಂಬಾಲು ಬಿದ್ದು, ಆತನ ಮೊಬೈಲ್ ಗ್ಯಾಲರಿಯಲ್ಲಿನ ಫೋಟೋಗಳನ್ನು ಬಳಸಿ ಅಶ್ಲೀಲವಾಗಿ ಮಾರ್ಫಿಂಗ್ ಮಾಡಿ, ಬ್ಲಾಕ್ ಮೇಲ್ ಮಾಡಲಾಗಿದೆ. ಅಷ್ಟೇ ಅಲ್ಲದೆ ಆತನ ಮೊಬೈಲ್ ಕಾಂಟ್ಯಾಕ್ಟ್ ನಂಬರ್‌ಗಳಿಗೆ ಮಾರ್ಫಿಂಗ್ ಮಾಡಲಾದ ಅಶ್ಲೀಲ ಫೋಟೋ ರವಾನಿಸಿದ್ದಾರೆ. ಇದರಿಂದ ಮನನೊಂದ ವೃದ್ಧ, ಸದ್ಯ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.
PublicNext
07/09/2022 07:00 pm