ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಪೊಲೀಸ್ ಅಧಿಕಾರಿ ಮೇಲೆ ಪತ್ನಿಯಿಂದಲೇ ಹಲ್ಲೆ.!

ರಾಂಚಿ: ತಮ್ಮ ಮೇಲೆ ಪತ್ನಿ ದೈಹಿಕ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿ ಜಾರ್ಖಂಡ್ ಪೊಲೀಸ್‌ (ಡಿಎಸ್‌ಪಿ ದರ್ಜೆಯ) ಅಧಿಕಾರಿ ಕಿಶೋರ್ ಕುಮಾರ್ ರಜಾಕ್ ಎಂಬುವರು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪತ್ನಿ ವರ್ಷಾ ಶ್ರೀವಾಸ್ತವ ಅವರು ತಮ್ಮ ಪತಿ, ಪೊಲೀಸ್‌ ಅಧಿಕಾರಿ ಕುಮಾರ್ ಮೇಲೆ ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಅಲ್ಲದೆ ಪತಿಯೇ ತನ್ನ ಮೇಲೆ ಹಲ್ಲೆ ನಡೆಸುತ್ತಿರುವುದಾಗಿ ಆರೋಪಿಸಿ ಮನೆಯಿಂದ ಹೊರಗೆ ಓಡಿ ಹೋಗುತ್ತಿರುವುದೂ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜಾರ್ಖಂಡ್ ಪೊಲೀಸ್‌ನಲ್ಲಿ 2016ರ ಬ್ಯಾಚ್ ಅಧಿಕಾರಿಯಾಗಿರುವ ಕುಮಾರ್ ಅವರು ಸರಣಿ ಟ್ವೀಟ್ ಮಾಡಿ ಅಳಲು ತೋಡಿಕೊಂಡಿದ್ದಾರೆ. 'ವರ್ಷಾ ಹಾಗೂ ನನ್ನ ಮದುವೆಯೇ ಬ್ಲ್ಯಾಕ್ ಮೇಲ್ ಮೂಲಕ ನಡೆದಿದೆ. ನನ್ನ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸುವ ಬೆದರಿಕೆ ಒಡ್ಡಿ ನನ್ನನ್ನು ಮದುವೆಯಾಗಿದ್ದರಿಂದ ನಮ್ಮ ಮದುವೆಯು "ಆಕಸ್ಮಿಕವಾಗಿದೆ". ನನ್ನ ಪತ್ನಿ ಇದುವರೆಗೆ ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಕನಿಷ್ಠ ಆರು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಎಂದು ಕುಮಾರ್ ದೂರಿದ್ದಾರೆ.

ಈ ನಡುವೆ ಕುಮಾರ್ ವಿರುದ್ಧ ರಾಮಗಢ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೌಟುಂಬಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿದ ಅವರ ಪತ್ನಿ, ಬಳಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

Edited By : Vijay Kumar
PublicNext

PublicNext

07/09/2022 05:02 pm

Cinque Terre

42.96 K

Cinque Terre

2

ಸಂಬಂಧಿತ ಸುದ್ದಿ