ಬೆಳಗಾವಿ: ಬೈಲಹೊಂಗಲ ಪಟ್ಟಣದಲ್ಲಿ ಮಕ್ಕಳ ಕಳ್ಳರು ಕಾಣಿಸಿಕೊಂಡಿದ್ದು, ಜನತೆಯಲ್ಲಿ ಆತಂಕ ಮೂಡಿಸಿದೆ. ಹೌದು ಸೋಮವಾರ ಮಧ್ಯಾಹ್ನ ವೇಳೆ ಪಟ್ಟಣದ ಪಿಂಜಾರ ಗಲ್ಲಿಯಲ್ಲಿ ಮಕ್ಕಳ ಕಳ್ಳನೋರ್ವ ಚಿಕ್ಕ ಬಾಲಕನನ್ನು ಕಳ್ಳತನ ಮಾಡಿ ಕರೆದೊಯ್ಯುವಾಗ ಗಲ್ಲಿಯ ಜನತೆಯಿಂದ ಧರ್ಮದೇಟು ತಿಂದು ಪರಾರಿಯಾದ ಘಟನೆ ನಡೆದಿದೆ.
ಹೌದು ಸ್ವಯಂ ಅರವಳ್ಳಿ ಎಂಬ ನಾಲ್ಕು ವರ್ಷದ ಬಾಲಕನು ಮನೆಯ ಮುಂದೆ ಆಟವಾಡುತ್ತಿದ್ದಾಗ ಕಳ್ಳನು ಐಸ್ಕ್ರೀಮ್ ಮಾರಾಟ ಮಾಡುವ ವೇಷದಲ್ಲಿ ಬಂದು ಬಾಲಕನನ್ನು ಡಬ್ಬಿಯಲ್ಲಿ ತುಂಬಿಕೊಂಡಿದ್ದಾನೆ. ಆಗ ಬಾಲಕ ಜೋರಾಗಿ ಅಳಲು ಪ್ರಾರಂಭಿಸಿದ್ದಾನೆ. ಬಾಲಕನು ಕಿರಾಚುಡುವ ಶಬ್ದ ಕೇಳಿ ತಾಯಿ ಆಶಾ ಮನೆಯಿಂದ ಹೊರಗೆ ಬಂದು ನಮ್ಮ ಮಗನನ್ನು ಏಕೆ ಡಬ್ಬಿಯಲ್ಲಿ ಕುಳಿಸಿಕೊಂಡು ಹೋಗುತ್ತಿರುವೆ ಎಂದು ಪ್ರಶ್ನಿಸಿದ್ದಾಳೆ ಅವನು ಮಾತನಾಡದೆ ಸುಮ್ಮನಾದಾಗ ಕೂಗಾಡಿ ಜನರನ್ನು ಸೇರಿಸಿದ್ದಾಳೆ. ಅಲ್ಲಿ ಸೇರಿದ ಜನರು ಕಳ್ಳನನ್ನು ಪ್ರಶ್ನಿಸಿದಾಗ ಅವನು ಸುಮ್ಮನೆ ಮಾತನಾಡದಾದಾಗ ಥಳಿಸಿದ್ದಾರೆ. ಅಷ್ಟರಲ್ಲಿ ಕಳ್ಳನು ಕೊಸರಿಕೊಂಡು ಪರಾರಿಯಾಗಿದ್ದಾನೆ.
ಕಳ್ಳನು ಸುಮಾರು 35-40 ವರ್ಷದವನಿದ್ದು, ಕಪ್ಪಗೆ ಗಡ್ಡದಾರಿಯಾಗಿದ್ದಾನೆ. ಅವನು ಕನ್ನಡ ಬಲ್ಲವನಲ್ಲ ಬೇರೆ ರಾಜ್ಯದವನು ಇರಬಹುದೆಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಈ ಘಟನೆಯಿಂದ ಸಾರ್ವಜನಿಕರು ಆತಂಕಗೊಂಡಿದ್ದು, ಕೂಡಲೇ ಪೊಲೀಸರು ಈ ಘಟನೆಯ ಕುರಿತು ತನಿಖೆ ನಡೆಸಿ ಸಂಶಯಾಸ್ಪದ ವ್ಯಕ್ತಿಗಳನ್ನು ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.
ಅಂಗನವಾಡಿಗೆ ಸಣ್ಣ ಮಕ್ಕಳು ತೆರಳುತ್ತಾರೆ ಮಕ್ಕಳ ಕಳ್ಳರ ದಂಡು ಪಟ್ಟಣಕ್ಕೆ ಆಗಮಿಸಿರುವ ಶಂಕೆ ವ್ಯಕ್ತವಾಗಿದ್ದು ಘಟನೆಯಿಂದ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕೂಡಲೇ ಪೊಲೀಸರು ಹೆಚ್ಚಿನ ನಿಗಾವಹಿಸಿ ಜನತೆಯನ್ನು ಅಲರ್ಟ ಮಾಡಬೇಕು ಹಾಗೂ ಘಟನೆ ಕುರಿತು ತನಿಖೆ ನಡೆಸಬೇಕು. ಪಟ್ಟಣದಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾಗಳನ್ನು ದುರಸ್ತಿ ಪಡಿಸಬೇಕು. ವಾಪಾರಸ್ಥರು ಹಾಗೂ ಸಾರ್ವಜನಿಕರು ಅಳವಡಿಸಿದ ಸಿಸಿ ಕ್ಯಾಮೆರಾಗಳನ್ನು ಸುಸ್ಥಿತಿಯಲ್ಲಿಡಲು ಸಲಹೆ ನೀಡಬೇಕು ಎಂದು ಪಾಲಕರು ಕೇಳಿಕೊಂಡಿದ್ದಾರೆ.
PublicNext
07/09/2022 11:35 am