ಬೆಳಗಾವಿ: ಮನೆಗೆ ಗೌರಿ ತರುವ ವಿಚಾರವಾಗಿ ಅಕ್ಕ-ತಂಗಿ ನಡುವೆ ಗಲಾಟೆಯಾಗಿ ಮನನೊಂದು ಅಕ್ಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ನಡೆದಿದೆ.
ಯಮಕನಮರಡಿ ಗ್ರಾಮದ 15 ವರ್ಷದ ರುಕ್ಮಿಣಿ ತೊಗರಿ ಮೃತ ದುರ್ದೈವಿ. ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಹಿನ್ನಲೆ ಪ್ರತಿವರ್ಷ ಮನೆಗೆ ಅಕ್ಕ ಗೌರಿಯನ್ನು ತರುತ್ತಿದ್ದ ವೇಳೆ ಸಹೋದರಿಯರು ಗಲಾಟೆ ಮಾಡಿಕೊಂಡಿದ್ದಾರೆ. ಪ್ರತಿ ಬಾರಿ ಅಕ್ಕನೇ ಏಕೆ ಗೌರಿ ಮನೆಗೆ ತರಬೇಕು ನಾನೂ ತರುತ್ತೇನೆ ಎಂದು ತಂಗಿಯ ವಾದ ಮಾಡಿದ್ದಳು. ತನ್ನ ತಂಗಿ ಸರೀತಾ ಈ ಬಾರಿ ಗೌರಿ ಮನೆಗೆ ನಾನು ತರುತ್ತೇನೆ ಎಂದಿದ್ದಕ್ಕೆ ಮನನೊಂದು ಅಕ್ಕ ರುಕ್ಮಿಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
PublicNext
04/09/2022 08:30 pm