ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುರುಘಾ ಅಲ್ಲಾ ಮೃಗ ! ವಿಕೃತ ಮನುಷ್ಯ ಅಳಿಯಲಿ : ಒಡನಾಡಿ ಸಂಸ್ಥೆ ಮುಖ್ಯಸ್ಥ ಕಿಡಿ

ಚಿತ್ರದುರ್ಗ : ಹಲವು ವರ್ಷಗಳಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅವನು ಮುರುಘಾ ಅಲ್ಲ ಮೃಗ' ಎಂದು ಒಡನಾಡಿ ಸಂಸ್ಥೆ ಮುಖ್ಯಸ್ಥ ಪರಶು ಕಿಡಿ ಕಾರಿದ್ದಾರೆ.

ಫೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶ್ರೀಗಳನ್ನು ಬಂಧಿಸಿ ಅಜ್ಞಾತ ಸ್ಥಳದಲ್ಲಿ ಇರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಈ ಅತ್ಯಾಚಾರದ ಆರೋಪದ ಮೇಲೆ ಒಟ್ಟು ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈಗಾಗಲೇ ಎರೆಡು ಜನರ ಬಂಧನವಾಗಿದೆ. ಇನ್ನೂ ಮೂವರ ಬಂಧನವಾಗಬೇಕಿದೆ.

ಮೂರನೇ ಆರೋಪಿ ಮಠದ ಉತ್ತರಾಧಿಕಾರಿ ಬಸವಾದಿತ್ಯ, ನಾಲ್ಕನೇ ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯ, ಇನ್ನೂ ಐದನೇ ಆರೋಪಿ ವಕೀಲ ಗಂಗಾಧರಯ್ಯ ಅವರ ಬಂಧನವಾಗಬೇಕಿದೆ. ಪ್ರಕರಣದ ಬೆಳವಣಿಗೆ ಬಗ್ಗೆ ಒಡನಾಡಿ ಸಂಸ್ಥೆಯ ಪರಶು ಮುಖ್ಯಸ್ಥ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಬಾಲಕಿಯರು ಒಡನಾಡಿ ಸಂಸ್ಥೆಯ ಮೂಲಕ ಕಳೆದ ಆಗಸ್ಟ್ 26ರಂದು ಮೈಸೂರಿನ ನಜರ್‌ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಒಡನಾಡಿ ಸಂಸ್ಥೆ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ಸಂಸ್ಥೆಯಾಗಿದೆ. ಬಳಿಕ ಪ್ರಕರಣವನ್ನು ಚಿತ್ರದುರ್ಗಕ್ಕೆ ವರ್ಗಾಯಿಸಲಾಗಿದೆ. ಶ್ರೀಗಳ ಬಂಧನಕ್ಕೆ ಒತ್ತಡ ಹೆಚ್ಚಾದ ಬೆನ್ನಲ್ಲೆ ಪ್ರಕರಣ ದಾಖಲಾಗಿ ಆರು ದಿನಗಳ ಬಳಿಕ ಅವರನ್ನು ಬಂಧಿಸಲಾಗಿದೆ.

ಮೈಸೂರು ಒಡನಾಡಿ ಸಂಸ್ಥೆ ಮುಖ್ಯಸ್ಥ ಪರಶು ಮಾತನಾಡಿ, 'ಶಿವಮೂರ್ತಿ ಶ್ರೀ ಕಾವಿ ಹಾಕಿರುವ ಬೆಕ್ಕು. ಮುರುಘಾ ಅಲ್ಲ ಅವರೊಂದು ಮೃಗ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಸಂತ್ರಸ್ತರಲ್ಲಿ ದಲಿತ ಮಕ್ಕಳಿದ್ದಾರೆ. ಮಠದಲ್ಲಿ ಇಂತಹ ಹೀನಾಯ ಸ್ಥಿತಿಯನ್ನು ಬಹಳಷ್ಟು ಮಕ್ಕಳು ಅನುಭವಿಸಿದ್ದಾರೆ. ಈ ಕಿರಾತಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮಕ್ಕಳ ಮೇಲೆ ಹತ್ತು ಹದಿನೈದು ವರ್ಷದಿಂದ ದೌರ್ಜನ್ಯ ನಡೆದಿದೆ. ಅದೆಲ್ಲವೂ ಹೊರಬರಬೇಕು. ಅಲ್ಲಿವರೆಗೂ ನಮಗೆ ಸಮಾಧಾನವಿಲ್ಲ' ಎಂದು ಹೇಳಿದ್ದಾರೆ.

ಕಾನೂನಾತ್ಮಕವಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮಕ್ಕಳಿಗೆ ನ್ಯಾಯ ಸಿಗಬೇಕು. ಬಂಧನ ಮಾತ್ರವಲ್ಲ. ಆ ಜಾಗದಲ್ಲಿ ಅದೆಷ್ಟು ಮಕ್ಕಳು ದೌರ್ಜನ್ಯಕ್ಕೆ ಒಳಗಾಗಿದ್ದಾರೋ ಗೊತ್ತಿಲ್ಲ. ಅವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳಬೇಕು. ಈ ವಿಕೃತ ಮನುಷ್ಯ ಅಳಿದು ಹೋಗಬೇಕು. ಸಾಕಷ್ಟು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಪೈಶಾಚಿಕ ಘಟನೆ ಸ್ಪಷ್ಟವಾಗಿದೆ. ಜನಸಾಮಾನ್ಯರು ಬಡಮಕ್ಕಳು, ಅನಾಥರು, ದಲಿತ ಮಕ್ಕಳ ಪರವಾಗಿದ್ದಾರೆ' ಎಂದರು.

Edited By :
PublicNext

PublicNext

02/09/2022 06:24 pm

Cinque Terre

38.87 K

Cinque Terre

1

ಸಂಬಂಧಿತ ಸುದ್ದಿ