ಮಲಪ್ಪುರಂ: ಮದುವೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಕಳೆದ ಜೂನ್ ತಿಂಗಳಲ್ಲಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಭಾವಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಯುವತಿ.
ಆರೋಪಿ ಅಶ್ವಿನ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಥ್ರಿಕ್ಕಾಲಯೂರ್ ಮೂಲದ ಮಾನ್ಯ, ಕಳೆದ ಜೂನ್ನಲ್ಲಿ ತನ್ನ ಮನೆಯ ಬೆಡ್ರೂಪ್ನಲ್ಲಿ ನೇಣಿಗೆ ಶರಣಾಗಿದ್ದರು. ಘಟನೆ ನಡೆದ ಎರಡು ತಿಂಗಳ ಬಳಿಕ ಅಶ್ವಿನ್ ಬಂಧನವಾಗಿದೆ.
ಕುಟುಂಬ ಆರೋಪ ಮಾಡಿದ ಬಳಿಕ ಅರೀಕೋಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ನಮ್ಮ ಮಗಳು ಸಾವಿನ ಬಗ್ಗೆ ನಮಗೆ ಅನುಮಾನ ಇದೆ ಮತ್ತು ಈ ಪ್ರಕರಣದ ತನಿಖೆ ಆಗಬೇಕೆಂದು ಕುಟುಂಬ ಒತ್ತಾಯ ಮಾಡಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಅಶ್ವಿನ್ ಕಿರುಕುಳದಿಂದಲೇ ಮಾನ್ಯ ಮೃತಪಟ್ಟಿರುವುದು ಮೊಬೈಲ್ನಿಂದ ಬಹಿರಂಗವಾಗಿದೆ.
ಅವರು ಬಳಸುತ್ತಿದ್ದ ಫೋನ್‌ನಿಂದ ಅವರ ಧ್ವನಿ ಸಂದೇಶಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ. 2021ರ ಸೆಪ್ಟೆಂಬರ್ನಲ್ಲಿ ನಿಶ್ಚಿತಾರ್ಥ ಆಗುವ ಮುನ್ನ ಕಳೆದ 8 ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು. ಕೆಲಸಕ್ಕೆಂದು ಅಶ್ವಿನ್ ವಿದೇಶಕ್ಕೆ ಹೋಗಿದ್ದ. ಇದರ ನಡುವೆ ಇಬ್ಬರ ಪ್ರೀತಿಯಲ್ಲಿ ಸಾಕಷ್ಟು ಏರಿಳಿತಗಳ ಸಂಭವಿಸಿದ್ದವು.
ಮದುವೆಯಿಂದ ದೂರ ಉಳಿಯುವ ಅಶ್ವಿನ್ ನಿರ್ಧಾರದಿಂದ ಬೇಸತ್ತು ಮಾನ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದೇಶದಿಂದ ಮರಳಿದ ನಂತರ ಆರೋಪಿ ಅಶ್ವಿನ್ನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
PublicNext
31/08/2022 02:56 pm