ರಾಂಚಿ: ಆಕೆ ಪೊಲೀಸ್ ಅಧಿಕಾರಿ ಆಗಬೇಕು ಎಂದು ಸಾವಿರಾರು ಕನಸ್ಸು ಕಟ್ಟಿಕೊಂಡು ಸಾಧನೆಯ ಹಾದಿಯಲ್ಲಿ ಶ್ರಮಿಸುತ್ತಿದ್ದಳು.
ಮನೆಯಲ್ಲಿ ಕಿತ್ತು ತಿನ್ನುವ ಬಡತನ ತಾಯಿಗೆ ಕ್ಯಾನ್ಸರ್ ಅಮ್ಮನ ಚಿಕಿತ್ಸೆಗಾಗಿ ಇದ್ದ ತುಂಡು ಭೂಮಿಯನ್ನು ಮಾರಿದ ಅಪ್ಪ. ಇಷ್ಟಾದರೂ ಅಮ್ಮ ಬದುಕುಳಿಯಲಿಲ್ಲ. ಇದು ಇತ್ತಿಚೆಗೆ ರಾಂಚಿಯಲ್ಲಿ ಪಾಗಲ್ ಪ್ರೇಮಿಯೊಬ್ಬ ಬೆಂಕಿ ಹಚ್ಚಿ ಕೊಂದ ಅಂಕಿತಾ ಎಂಬ ವಿದ್ಯಾರ್ಥಿನಿಯ ಕಥೆ ವ್ಯಥೆಯಿದು.
ಹೌದು ನೀವು ಅಂಕಿತಾಳ ಜೀವನದ ಕಥೆ ಕೇಳಿದ್ರೆ ನಿಮ್ಮ ಕಣ್ಣಾಲೆ ಕೂಡಾ ಒದ್ದೆಯಾಗದೆ ಇರಲಾರದು. ಅಮ್ಮನನ್ನು ಕಳೆದುಕೊಂಡ ಈಕೆ ಅಪ್ಪನ ದಿನದ 200 ರೂ. ಸಂಬಂಳದಲ್ಲಿಯೇ ತಾನೊಬ್ಬ ಉತ್ತಮ ಪೊಲೀಸ್ ಆಫೀಸರ್ ಆಗಬೇಕು ಎಂದು ಕನಸ್ಸು ಕಂಡಿದ್ದಳು.
ಬೆಟ್ಟದಂತ ಕನಸ್ಸನ್ನು ನನಸು ಮಾಡಿಕೊಳ್ಳಲು ನಿತ್ಯ ತನ್ನ ದ್ವೀತಿಯ ಪಿಯುಸಿ ಓದಿನೊಂದಿಗೆ ಪ್ರಾಥಮಿಕ ತರಗತಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳಿ ತಿಂಗಳಿಗೆ 1,000 ರೂ ಗಳಿಸುತ್ತಿದ್ದಳು.
ಹೀಗೆ ಕಂಡ ಕನಸ್ಸು ನನಸಾಗಿಸುವ ತವಕದಲ್ಲಿರುವ ಅಂಕಿತಾ ಬಾಳಲ್ಲಿ ಬಂದ ಮುಸ್ಲಿಂ ಯುವಕ ಶಾರುಖ್ ಎಂಬಾತ ಈಕೆಗೆ ಪ್ರೀತ್ಸೆ ಪ್ರೀತ್ಸೆ ಎಂದು ಪೀಡಿಸುತ್ತಿದ್ದ. ಆದ್ರೆ ಈತನ ಮಾತಿಗೆ ಕಿವಿಗೊಡದ ಅಂಕಿತಾ ತನ್ನ ಗುರಿಯತ್ತ ಚಿತ್ತಹರಿಸಿದ್ದಳು.
ಆದರೆ ಇಷ್ಟಕ್ಕೆ ಸುಮ್ಮನಾಗದ ಪಾಗಲ್ ಪ್ರೇಮಿ ಶಾರುಖ್ ಆಕೆಯ ಮೊಬೈಲ್ ಗೆ ಕರೆ ಮಾಡಿ ಸ್ನೇಹಿತನಾಗುವಂತೆ ಪೀಡಿಸುತ್ತಿದ್ದ. ನನ್ನ ಜೊತೆ ಮಾತನಾಡದಿದ್ದರೆ, ನಾನು ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಸಿದ.
ಬೆದರಿಸಿದ ಮಾತಿನಂತೆ ಈ ಪಾಪಿ ಶಾರುಖ್ ಆಗಸ್ಟ್ 23ರಂದು ಅಂಕಿತಾಗೆ ಬೆಂಕಿ ಹಚ್ಚಿದ್ದ. ಗಂಭೀರವಾಗಿ ಗಾಯಗಳಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಅಂಕಿತಾ, ಚಿಕಿತ್ಸೆ ಫಲಕಾರಿಯಾಗದೇ ಆಗಸ್ಟ್ 28ರ ಭಾನುವಾರ ಕೊನೆಯುಸಿರೆಳೆದಿದ್ದಾಳೆ.
ಇನ್ನು ಸಾವಿಗೂ ಮುನ್ನ ಅಂಕಿತಾ ಶಾರೂಖ್ ಹಾಕಿದ ಬೆದರಿಕೆ ಬಗ್ಗೆ ತನ್ನ ತಂದೆಗೆ ಹೇಳಿದ್ದೆ. ಆ ವೇಳೆ ನನ್ನ ತಂದೆ ಆತನ ಕುಟುಂಬದ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು ಎಂದು ಪೊಲೀಸರ ಮುಂದೆ ಹೇಳಿದ್ದಾಳೆ.
ಸೋಮವಾರ ರಾತ್ರಿ ಊಟದ ನಂತರ, ನಾವು ಮಲಗಲು ಹೋದೆವು. ನಾನು ಇನ್ನೊಂದು ಕೋಣೆಯಲ್ಲಿ ಮಲಗಿದ್ದೆ. ನನ್ನ ಬೆನ್ನಿನಲ್ಲಿ ನೋವು ಮತ್ತು ಸುಡುತ್ತಿರುವ ವಾಸನೆಯನ್ನು ಅನುಭವಿಸಿದೆ.
ಕಣ್ಣು ತೆರೆದಾಗ ಶಾರೂಖ್ ಓಡಿಹೋಗುವುದನ್ನು ನಾನು ನೋಡಿದೆ. ನಾನು ನೋವಿನಿಂದ ಕಿರುಚುತ್ತಾ ನನ್ನ ತಂದೆಯ ಕೋಣೆಗೆ ಓಡಿದೆ. ಆ ವೇಳೆ ನನ್ನನ್ನು ಆಸ್ಪತ್ರೆಗೆ ಕರೆದೊಯ್ದರು ಎಂದು ಅಂಕಿತಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ 19 ವರ್ಷದ ಅಂಕಿತಾ ಅಸುನೀಗಿದ್ದು ಪಾಪಿ ಶಾರೂಖ್ ಅಂದರ್ ಆಗಿದ್ದಾನೆ. ಇನ್ನು ಅಂಕಿತಾಳ ಕರುಣಾಜನಕ ಕಥೆ ಕೇಳಿದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಆಗಸ್ಟ್ 29 ರಂದು ಅಂಕಿತಾ ಅವರ ಪಾಲಕರಿಗೆ 10 ಲಕ್ಷ ರೂ. ಪರಿಹಾರ ಮೊತ್ತ ಘೋಷಿಸಿದ್ದಾರೆ.
PublicNext
30/08/2022 01:54 pm