ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿಯಲ್ಲಿ ಹಾಡು ಹಗಲೇ ಭೀಕರ ಕೊಲೆ; ಬೆಚ್ಚಿ ಬಿದ್ದ ಜನತೆ

ಬೆಳಗಾವಿ : ಚಿರತೆ ಆತಂಕದ ನಡುವೆ ಬೆಳಗಾವಿ ನಗರದಲ್ಲಿ ಹಾಡು ಹಗಲೇ ವ್ಯಕ್ತಿಯೊರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ನಡೆದಿದೆ.ಇಂದು ಇಳಿಹೊತ್ತಿನಲ್ಲಿ ಬಂದ ಹಂತಕರು ವ್ಯಕ್ತಿಯ ರುಂಡವನ್ನು ಚಂಡಾಡಿದ್ದಾರೆ ಪರಾರಿಯಾಗಿದ್ದಾರೆ. ಇನ್ನು ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ಗದಗಯ್ಯ ಹಿರೇಮಠ ಕೊಲೆಯಾದ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಬೈಕ್ ಮೇಲೆಯೇ ಬಿದ್ದಿರುವ ಮೃತ ದೇಹ ನೋಡಿದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Nirmala Aralikatti
PublicNext

PublicNext

26/08/2022 06:16 pm

Cinque Terre

63.82 K

Cinque Terre

8