ದಾವಣಗೆರೆ: ಹೊನ್ನಾಳಿ ಪಟ್ಟಣದ ಟಿ. ಬಿ. ಸರ್ಕಲ್ ನಲ್ಲಿ ಅಳವಡಿಸಲಾಗಿದ್ದ ವೀರ ಸಾವರ್ಕರ್ ಹಾಗೂ ಬಾಲಗಂಗಾಧರ ತಿಲಕ್ ರ ಭಾವಚಿತ್ರ, ಫ್ಲೆಕ್ಸ್ ಅನ್ನು ದುಷ್ಕರ್ಮಿಗಳು ಹರಿದು ಹಾಕಿಲ್ಲ. ಜೋರಾದ ಗಾಳಿ ಬೀಸಿದ ಕಾರಣ ಫ್ಲೆಕ್ಸ್ ಹರಿದು ಹೋಗಿದೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹೊನ್ನಾಳಿಯಲ್ಲಿ ಸಾವರ್ಕರ್ - ತಿಲಕ್ ಬ್ಯಾನರ್ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದ್ದು, ಹಿಂದೂ ಮಹಾಸಭಾ ಮುಖಂಡರು ಫ್ಲೆಕ್ಸ್ ಅನ್ನು ದುಷ್ಕರ್ಮಿಗಳು ಹರಿದು ಹಾಕಿದ್ದಾರೆ. ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಆದ್ರೆ, ಪೊಲೀಸರು ಫ್ಲೆಕ್ಸ್ ಸಮೀಪ ಅಳವಡಿಸಿದ್ದ ಸಿಸಿಟಿವಿಯಲ್ಲಿ ಜೋರಾಗಿ ಗಾಳಿ ಬೀಸಿದ ಕಾರಣ ಹರಿದು ಹೋಗಿರುವುದು ಗೊತ್ತಾಗಿದೆ. ಇದನ್ನು ಹಿಂದೂಮಹಾಸಭಾ ಸದಸ್ಯರಿಗೆ ತೋರಿಸಿದ ಬಳಿಕ ಸುಮ್ಮನಾಗಿದ್ದಾರೆ.
ಗಾಳಿಯಿಂದ ಫ್ಲೆಕ್ಸ್ ಹರಿದಿರುವುದು ಸಿಸಿ ಟಿವಿಯಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ಕಿಡಿಗೇಡಿಗಳು ಕಿತ್ತು ಹಾಕಿದ್ದಾರೆ ಎಂಬ ಆರೋಪ ಬಂದಿತ್ತು. ಸಮೀಪದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಲಾಗಿದೆ. ಜೋರಾಗಿ ಗಾಳಿ ಬೀಸಿದ ಕಾರಣದಿಂದ ದೊಡ್ಡದಿದ್ದ ಫ್ಲೆಕ್ಸ್ ಹರಿದಿದೆ. ಯಾವುದೇ ರೀತಿಯ ತಪ್ಪು ಸಂದೇಶ ಜನರಿಗೆ ಹೋಗಬಾರದು. ಶಾಂತಿ, ಸೌಹಾರ್ದತೆಯಿಂದ ಗಣೇಶೋತ್ಸವ ಹಬ್ಬ ಆಚರಿಸುವಂತೆ ಸಿ. ಬಿ. ರಿಷ್ಯಂತ್ ಹೇಳಿದ್ದಾರೆ.
PublicNext
25/08/2022 08:03 pm