ಮುಂಬೈ: ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ಮೊಸರು ಮಡಿಕೆ ಒಡೆಯುವ ವೇಳೆ ಭಾರಿ ದುರಂತವೊಂದು ಮುಂಬೈನಲ್ಲಿ ಸಂಭವಿಸಿದ್ದು, 24 ವರ್ಷದ ಯುವಕನೊಬ್ಬ ಸಾವನ್ನಪ್ಪಿದ್ದಾನೆ.
ಸಂದೇಶ್ ದಲ್ವಿ ಮೃತ ಯುವಕ. ದುರ್ಘಟನೆಯು ವಿಲ್ಲೆ ಪಾರ್ಲೆಯ ಬಮನ್ವಾಡಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಯುವಕ ಸಾವನ್ನಪ್ಪಿದ್ದಾನೆ.
ಮಾನವ ಪಿರಾಮಿಡ್ ಮೂಲಕ ಮೊಸರು ಮಡಿಕೆ ಒಡೆಯುವ ಸ್ಪರ್ಧೆ ನಡೆಯುತ್ತಿತ್ತು. ಈ ವೇಳೆ ಮೊಸರು ಮಡಿಕೆ ಒಡೆದ ಯುವಕ ಇಳಿಯದೆ ಮಡಿಕೆಗೆ ಹಿಡಿಯುತ್ತಾನೆ. ಇದನ್ನು ಅರಿಯದೆ ಆತನ ಕೆಳಗಿದ್ದ ಕೆಳಗೆ ಬಾಗುತ್ತಾನೆ. ಈ ವೇಳೆ ಮೇಲಿದ್ದ ಯುವಕ ಆಯತಪ್ಪಿ ಬೀಳುತ್ತಾನೆ. ಇನ್ನು ಆತನನ್ನು ಹಿಡಿಯಲು ಯತ್ನಿಸಿದ ವ್ಯಕ್ತಿಯೂ ಕೆಳಗೆ ಬೀಳುತ್ತಾನೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆಯನ್ನ ಆರಂಭಿಸಿದ್ದಾರೆ. ಇದುವರೆಗೂ ಯಾರನ್ನೂ ಬಂಧಿಸಿಲ್ಲ.
ಗಾಯಗೊಂಡಿದ್ದ ವ್ಯಕ್ತಿಯನ್ನ ಕೂಪರ್ ಆಸ್ಪತ್ರೆಗೆ ರಾತ್ರೋರಾತ್ರಿ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದ ಹಿನ್ನೆಯಲ್ಲಿ ಭಾನುವಾರ ಅವರನ್ನ ನಾನಾವತಿ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದರು. ಆದರೆ ಸೋಮವಾರ ರಾತ್ರಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ ಎಂದು ಶಿವ ಶಂಬೋ ಗೋವಿಂದ ಪಠಕ್ ಗ್ರೂಪ್ ಹೇಳಿದೆ.
PublicNext
24/08/2022 07:30 pm