ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಾಲ ಕೊಡಿಸಿದ್ದ ಹಣ ಕೇಳಿದ್ದಕ್ಕೆ ಕ್ರಿಕೆಟ್‌ ಬ್ಯಾಟ್‌ ನಿಂದ ತಲೆಗೊಡೆದು ವ್ಯಕ್ತಿಯ ಕೊಲೆ

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬಾಗೂರು ಗ್ರಾಮದ ವೆಂಕಟೇಶಪ್ಪ @ಸಿದ್ದರಾಮಯ್ಯ(65) ಸಾಲ ಕೊಡಿಸಿದ್ದ ತಪ್ಪಿಗೆ ಕೊಲೆಯಾಗಿ ಹೋಗಿದ್ದಾರೆ! ಬಾಗೂರಿನ ಸಂಬಂಧಿಕ ಶಿವಪ್ಪ @ಮೇಷ್ಟ್ರು(46) ಕೊಲೆ ಮಾಡಿ ನಾಪತ್ತೆಯಾಗಿದ್ದಾನೆ.

ಸಾಲದ ಹಣ ಕೇಳಲು ತೆರಳಿದ್ದಾಗ ಶಿವಪ್ಪ ಕ್ರಿಕೆಟ್ ಬ್ಯಾಟ್ ನಿಂದ ತಲೆಗೆ ಒಂದೇ ಏಟು ಬಾರಿಸಿದ್ದ. ತೀವ್ರ ಗಾಯಗೊಂಡಿದ್ದ ವೆಂಕಟೇಶಪ್ಪರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಿಸದೆ ವೆಂಕಟೇಶಪ್ಪ ನಿನ್ನೆ ರಾತ್ರಿ ಆಸ್ಪತ್ರೆಲಿ ಸಾವನ್ನಪ್ಪಿದ್ದಾರೆ. ಬ್ಯಾಟ್‌ ನಿಂದ ಹಲ್ಲೆ ಮಾಡೋ ದೃಶ್ಯ Public Next ಗೆ ಲಭ್ಯವಾಗಿದೆ.

ಆ.20ರಂದು ಬೆಳಗ್ಗೆ 7.30ಕ್ಕೆ ಶಿವಪ್ಪ ವಾಸವಿದ್ದ ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ಮುನ್ನೆಕೊಳಲು JRM Pearl ಅಪಾರ್ಟ್ಮೆಂಟ್ ಗೆ ವೆಂಕಟೇಶಪ್ಪ @ ಸಿದ್ದರಾಮಯ್ಯ ಸಾಲ‌ ನೀಡಿದ್ದ ಮಾಲೀಕರಾದ ನಂಜುಂಡ ರೆಡ್ಡಿ & ಪ್ರಕಾಶ್ ಜೊತೆ ಶಿವಪ್ಪನ ಮನೆಗೆ ತೆರಳಿದ್ದರು. ನಂಜುಂಡ ರೆಡ್ಡಿ 7.50 ಲಕ್ಷ ಸಾಲ ನೀಡಿದ್ದರು. ಶಿವಪ್ಪ 5 ಲಕ್ಷದ ಚೆಕ್ ನೀಡಿದ್ದ. ಅದು ಬೌನ್ಸ್ ಆಗಿತ್ತು. ಮೊನ್ನೆ ಹಣ ಕೇಳುವಾಗ ಶಿವಪ್ಪ ಕ್ರಿಕೆಟ್ ಬ್ಯಾಟಿನಿಂದ ತಲೆಗೆ ಬಲವಾಗಿ ಹೊಡೆದಿದ್ದ.

ತೀವ್ರ ಗಾಯಗೊಂಡಿದ್ದ ವೆಂಕಟೇಶಪ್ಪರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ನಿನ್ನೆ ರಾತ್ರಿ 10 ಗಂಟೆಗೆ ವೆಂಕಟೇಶಪ್ಪ ಸಾವನ್ನಪ್ಪಿದ್ದಾರೆ. ಎಸ್ಕೇಪ್ ಆಗಿರುವ ಶಿವಪ್ಪ ಮತ್ತು ಆತನ ಹೆಂಡತಿಗಾಗಿ ಮಾರತ್ತಹಳ್ಳಿ ಪೊಲೀಸರು ಬಲೆ ಬೀಸಿದ್ದಾರೆ.

-ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ

Edited By : Nagesh Gaonkar
PublicNext

PublicNext

22/08/2022 04:50 pm

Cinque Terre

56.97 K

Cinque Terre

1

ಸಂಬಂಧಿತ ಸುದ್ದಿ