ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೀತಿಸಲು ಒಪ್ಪದ ಯುವತಿಯನ್ನ ಸಿನಿಮೀಯ ರೀತಿ ಕೊಂದ ಪಾಗಲ್​ ಪ್ರೇಮಿ ಜೈಲು ಪಾಲು

ಹಾಸನ: ತನ್ನನ್ನು ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ಪಾಗಲ್‌ ಪ್ರೇಮಿಯೋರ್ವ ಸಿನಿಮೀಯ ರೀತಿ ಕೊಲೆ ಗೈದ ಘಟನೆ ಹಾಸನದ ಹೊರವಲಯದ ಭುವನಹಳ್ಳಿ ಬಳಿ ನಡೆದಿದೆ.

ಅರಸೀಕೆರೆ ನಿವಾಸಿ ಶರಣ್ಯ ಕೊಲೆಯಾದ ಯುವತಿ. ಭರತ್ ಕೊಲೆಗೈದ ಪಾಪಿ. ಆಗಸ್ಟ್ 3ರಂದು ಹಾಸನದ ಹೊರವಲಯದ ಭುವನಹಳ್ಳಿ ಬಳಿ ಘಟನೆ ನಡೆದಿತ್ತು. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕೃತ್ಯವನ್ನು ಬೆಳಕಿಗೆ ತಂದಿದ್ದಾರೆ.

ಆರೋಪಿ ಭರತ್‌ ಮುಸುಕು ಹಾಕಿಕೊಂಡು ಆಲ್ಟೋ ಕಾರಿನಲ್ಲಿ ಬಂದಿದ್ದ. ಈ ವೇಳೆ ಹಾಸನದ ಹೊರವಲಯದ ಭುವನಹಳ್ಳಿ ಬಳಿ ಸರಣಿ ಅಪಘಾತ ಎಸಗಿ, ಸರ್ಕಲ್​ನ ಒಂದು ಮೂಲೆಗೆ ರಭಸವಾಗಿ ನುಗ್ಗಿ ಡಿಕ್ಕಿ ಹೊಡೆದು ನಿಲ್ಲಿಸಿದ್ದ. ಇದಕ್ಕೂ ಮೊದಲೇ ಆತ ಸರ್ಕಲ್​ನ ಅಣತಿ ದೂರದಲ್ಲಿ ಶರಣ್ಯಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಬಂದಿದ್ದ.

ಶರಣ್ಯ ತಾನು ಕೆಲಸ ಮಾಡುತ್ತಿದ್ದ ಭಾರತಿ ಕಾಫಿ ಕ್ಯೂರಿಂಗ್​ಗೆ ನಡೆದು ಕೊಂಡು ಹೋಗುವಾಗ ಭರತ್ ಈ ನೀಚ ಕೆಲಸ ಮಾಡಿದ್ದಾನೆ. ಇದಕ್ಕೆ ಕಾರಣ ಶರಣ್ಯ ಭರತ್ ನನ್ನ ಪ್ರೀತಿಸಲು ನಕಾರ ಎತ್ತಿದ್ದಳು ಎಂಬುದು. ಯಾವಾಗ ಶರಣ್ಯ ಸಿಗಲ್ಲ ಅಂತ ಗೊತ್ತಾಯ್ತೋ ಆಗ ಭರತ್, ಮೈಸೂರಿನಿಂದ ಬಾಡಿಗೆ ಕಾರೊಂದನ್ನು ಪಡೆದು ಬಂದು ಈ ಕೃತ್ಯ ಎಸಗಿದ್ದಾನೆ.

ಅಸಲಿಗೆ ಶರಣ್ಯ ಹಾಗೂ ಭರತ್ ಪರಿಚಯಸ್ಥರೆ. ಈ ಘಟನೆ ನಡೆದ ಆರೋಪಿ ಭರತ್​, ತನ್ನ ಪರ್ಸ್, ಐಡಿ ಕಾರ್ಡ್​ ಎಲ್ಲವನ್ನು ಕಾರಲ್ಲಿ ಬಿಟ್ಟು ಪರಾರಿಯಾಗಿದ್ದ. ಸ್ಥಳಕ್ಕೆ ಬಂದ ಪೊಲೀಸರಿಗೆ ಈ ಕೃತ್ಯ ಹೀಗೆ ಆಗಿದೆ ಅನ್ನೋ ಅನುಮಾನ ಮೊದಲೇ ಮೂಡಿತ್ತು. ಅದಕ್ಕೆ ಪೂರಕ ಎಂಬಂತೆ ಭರತ್, ಕಾರಿನ ನಂಬರ್ ಪ್ಲೇಟ್ ಕಾಣದಂತೆ ಕಾರನ್ನು ಬಾಡಿಗೆ ತಂದಿದ್ದ.

ಆರೋಪಿ ಭರತ್ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದ. ಶರಣ್ಯ ಚನ್ನಾಗಿ ಓದಿಕೊಂಡಿದ್ದಳು. ಶರಣ್ಯ ಪ್ರೀತಿಗೆ ಒಪ್ಪದಿದ್ದಾಗ ಹಲವು ಬಾರಿ ಆಕೆಯ ಜತೆ ಭರತ್ ಜಗಳವಾಡಿದ್ದ ಮತ್ತು ಕಿರುಕುಳ ನೀಡಿದ್ದ. ಇದೀಗ ಆಕೆಯ ಜೀವವನ್ನೇ ತೆಗೆದಿದ್ದಾನೆ. ಈ ಸಂಬಂಧ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭರತ್ ಈಗ ಜೈಲು ಪಾಲಾಗಿದ್ದಾನೆ.

Edited By : Vijay Kumar
PublicNext

PublicNext

21/08/2022 12:47 pm

Cinque Terre

47.36 K

Cinque Terre

0