ತುಮಕೂರು : ನಿವೇಶನ ವೊಂದರ ಖಾತೆ ಮಾಡಿಕೊಡಲು ವ್ಯಕ್ತಿಯೋರ್ವರಿಂದ 50,000 ಲಂಚ ಪಡೆದಿದ್ದ ಪಿಡಿಒ ಗೆ ಇಲ್ಲಿನ 7ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಜಿಲ್ಲೆಯ ಗುಬ್ಬಿ ತಾಲೂಕು ಚೇಳೂರಿನ ಪಿಡಿಒ ಸಿದ್ದೇಶ್ವರ ಶಿಕ್ಷೆಗೊಳಗಾದ ಆರೋಪಿ, 2019ರಲ್ಲಿ ನಿವೇಶನ ಒಂದರ ಖಾತೆ ಮಾಡಿಕೊಡಲು ಮಣಿಕಂಠ ಎಂಬುವವರಿಂದ ಗ್ರಾಮ ಪಂಚಾಯತ್ ಪಿಡಿಒ ಸಿದ್ದೇಶ್ವರ 50 ಸಾವಿರ ರೂ ಲಂಚ ಪಡೆಯುವಾಗ ತುಮಕೂರು ಎಸಿಬಿ ತಂಡ ಬೀಸಿದ ಬಲೆಗೆ ಸಿಕ್ಕಿಬಿದ್ದಿದ್ದರು.
ಪ್ರಕರಣ ದಾಖಲಿಸಿಕೊಂಡು ಆರೋಪಿ ವಿರುದ್ಧ ಅಂದಿನ ಇನ್ಸ್ ಫೆಕ್ಟರ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಎರಡು ಕಡೆಯ ವಾದ ವಿವಾದ ಆಲಿಸಿದ 7ನೇ ಜಿಲ್ಲಾ ಮತ್ತುಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ರಾಮಲಿಂಗೇಗೌಡರು ಇಂದು ಆರೋಪಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಎಸಿಬಿ ವಿಶೇಷ ಅಭಿಯೋಜಕರಾದ ಎನ್ ಡಿ. ಬಸವರಾಜು ಸರ್ಕಾರದ ಪರವಾಗಿ ವಾದಿಸಿದ್ದರು.
PublicNext
17/08/2022 07:10 pm