ದಾವಣಗೆರೆ: ಯುವತಿಯರ ಜೊತೆ ಸೇರಿ ರಕ್ಷಣಾ ವೇದಿಕೆ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿಯ ಶಿವರಾಜ್ ಚಂದ್ರಪಟ್ಟಣ, ಹಾಸನದ ರಮ್ಯಾ ಅಲಿಯಾಸ್ ಭೂಮಿಕಾ ಅಲಿಯಾಸ್ ಸಹನಾ, ತುಮಕೂರು ಜಿಲ್ಲೆಯ 24 ವರ್ಷದ ಪವಿತ್ರಾ, ಚಿಕ್ಕಮಗಳೂರಿನ ಸುರೇಶ್ ಕುಮಾರ್ ಬಂಧಿತ ಆರೋಪಿಗಳು. ಬಂಧಿತರಿಂದ 1,20,000 ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ್ದ ಮಾರುತಿ ಜಿನ್, ಆರು ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ದಾವಣಗೆರೆಯ ವ್ಯಕ್ತಿಯೊಬ್ಬರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯೊಬ್ಬಳ ಪರಿಚಯವಾಗಿದೆ. ಈ ಸಲುಗೆ ಹೋಂ ಸ್ಟೇಗೆ ಯುವತಿ ಜೊತೆ ಹೋಗುವಷ್ಟರ ಮಟ್ಟಿಗೆ ಬೆಳೆದಿದೆ. ಇನ್ನು ಮೊದಲೇ ಯೋಜನೆ ರೂಪಿಸಿದ್ದ ಆರೋಪಿಗಳು ವ್ಯಕ್ತಿಯನ್ನು ಖೆಡ್ಡಾಕ್ಕೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನೂ ಸಹ ಯುವತಿ ಮೇಲಿನ ಮೋಹಕ್ಕೆ ಬಿದ್ದಿದ್ದಾನೆ. ಹೋಂ ಸ್ಟೇನಲ್ಲಿ ಯುವತಿ ಜೊತೆ ಈತ ಇದ್ದಾಗ ನಾಲ್ವರು ಆಗಮಿಸಿ ತಮ್ಮ ಖಾಸಗಿ ಫೋಟೋ ಸೆರೆ ಹಿಡಿದಿದ್ದೇವೆ.
ಯುವತಿ ಜೊತೆ ಇರುವ ನಾವು ರಕ್ಷಣಾ ವೇದಿಕೆಯವರು. 15 ಲಕ್ಷ ರೂಪಾಯಿ ನೀಡದಿದ್ದರೆ ನಿಮ್ಮ ಮನೆಯವರಿಗೆ ಈ ವಿಷಯ ತಿಳಿಸುತ್ತೇವೆ ಎಂಬ ಬೆದರಿಕೆ ಹಾಕಿದ್ದಾರೆ. ಆಗ 1,20,000 ರೂಪಾಯಿ ಪಡೆದು ಇನ್ನು ಉಳಿದ ಹಣ ಆದಷ್ಟು ಬೇಗ ನೀಡುವಂತೆ ತಾಕೀತು ಮಾಡಿದ್ದರು.
PublicNext
15/08/2022 09:29 pm