ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಹಾಡು ಹಗಲೇ ಮನೆ ಕಳ್ಳತನ....!

ಗದಗ: ಇಂದು ಎಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಯವರೆಲ್ಲ ಧ್ವಜಾರೋಹಣದ ಸಡಗರದಲ್ಲಿದ್ದಾಗ ಹಿಂಬಾಗಿಲಿನ ಚಿಲಕ ಮುರಿದು 5 ಲಕ್ಷ ನಗದು 250 ಗ್ರಾಂ ಚಿನ್ನಾಭರಣ ಕಳ್ಳತನವಾದ ಘಟನೆ ಸೋಮವಾರ ನಗರದ ಹುಡ್ಕೋ ಕಾಲೋನಿಯ ಮೂರನೇ ಕ್ರಾಸನಲ್ಲಿ ಬೆಳಿಗ್ಗೆ ನಡೆದಿದೆ.

ಕಿವಿಯೋಲೆ ಬಳೆ ಹಾಗೂ ಮಾಂಗಲ್ಯ ಸರ್ ಸೇರಿದಂತೆ 250 ಗ್ರಾಮ ಚಿನ್ನಾಭರಣ ದೋಚಿದ್ದಾರೆ. ಬೆಳ್ಳಿಯ ಸಾಮಾನುಗಳನ್ನು ಮುಟ್ಟದೇ ಕೇವಲ ಬಂಗಾರ ಹಾಗೂ ನಗದು ಮಾತ್ರ ಕಳ್ಳರು ದೋಚಿದ್ದಾರೆ.ಶಿರಹಟ್ಟಿ ತಾಲೂಕಿನ ಮಾಗಡಿ ಬಳಿಯ ಪರಸಾಪುರ ಗ್ರಾಮದ ಬಳಿ ಸ್ಟೋನ್ ಕ್ರಸರ್ ಹೊಂದಿರುವ ಬಸವರಾಜ್ ಎಸ್ ರಾಯಪುರ ಎಂಬುವವರದೇ ಮನೆ ಕಳ್ಳತನವಾಗಿದೆ. ಖದೀಮರು ವಿಗ್ ಧರಿಸಿ ಸ್ಟಿಫ್ಟ್ ಕಾರಿನಲ್ಲಿ ಬಂದಿದ್ದರು ಎಂದು ಹೇಳಲಾಗುತ್ತಿದ್ದು, ಕಳ್ಳರು ರಸ್ತೆಯಲ್ಲಿ ಸಂಚರಿಸುವ ಚಲನವಲನಗಳು ಅದೇ ಪ್ರದೇಶದ ಮನೆಯೊಂದರ ಸಿಸಿ‌ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎನ್ನಲಾಗಿದೆ.

‌ಧ್ವಜಾರೋಹಣ ಮುಗಿಸಿ ಅರ್ಧ ಗಂಟೆಯಲ್ಲಿಯೇ ಮನೆಗೆ ಮರಳಿ‌ ನೋಡಿದಾಗ ಹಂದಿನ ಬಾಗಿಲ ತೆರದಿದ್ದು ನೋಡಿ ಗಾಬರಿ ಬಿದ್ದು, ಬೆಡ್ ರೂಮ್ ಮಹಡಿ ಮನೆಯ ಬೆಡರೂಮನ್ ಕಪಾಟು ತೆರದಿದ್ದು ನೋಡಿ ಬೆಚ್ಚಿ ಬಿದ್ದಿದ್ದಾರೆ, ಪೊಲೀಸ ಮಾಹಿತಿ ತಿಳಿಸಿದ್ದಾಗ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿರುವ ಸಿಪಿಐ ಸುಬ್ಬಾಪೂರಮಠ ಹಾಗೂ ಸಿಬ್ಬಂದಿಯವರು ಪರಿಶೀಲನೆ ನಡೆಸಿದ್ದಾರೆ.

ಕೇವಲ್ ಅರ್ಧಗಂಟೆಯಲ್ಲಿ ನಡೆದ ಕಳ್ಳರ ಕರಾಮತಗೆ ಮನೆ ಮಾಲೀಕ ಬಸವರಾಜ್ ದಂಪತಿ ದಂಗಾಗಿದ್ದು, ಹಾಡುಹಗಲೇ ಈ ರೀತಿ‌ ಕಳ್ಳತನ ನಡೆದರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗದಗ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

Edited By : Nagesh Gaonkar
PublicNext

PublicNext

15/08/2022 06:39 pm

Cinque Terre

51.98 K

Cinque Terre

0

ಸಂಬಂಧಿತ ಸುದ್ದಿ