ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಲಿವ್​ ಇನ್​ ರಿಲೇಶನ್‌ಶಿಪ್‌'ನಲ್ಲಿ ಇದ್ದು- ಮದುವೆಗೆ ನಿರಾಕರಿಸಿದ ಪ್ರಿಯಕರನನ್ನ ತುಂಡರಿಸಿದ ಲೇಡಿ..!

ಲಖನೌ: ಮದುವೆ ಆಗ್ತಿನಿ ಅಂತ ಮಾತಕೊಟ್ಟು ಲಿವ್​ ಇನ್​ ಸಂಬಂಧದಲ್ಲಿ ಇದ್ದು, ದೈಹಿಕ ಸಂಪರ್ಕವನ್ನೂ ಬೆಳೆಸಿ ಕೊನೆಗೆ ಮದುವೆಗೆ ನಿರಾಕರಿಸಿದ ಪ್ರಿಯತಮನನ್ನು ಪೀಸ್​ ಪೀಸ್​ ಮಾಡಿದ ಯುವತಿಯೊಬ್ಬಳು, ಆತನ ಮೃತದೇಹವನ್ನು ಸೂಟ್​ಕೇಸ್​ನಲ್ಲಿ ಹೆಣವನ್ನು ಸಾಗಿಸುವಾಗ ಸಿಕ್ಕಿಬಿದ್ದ ಭಯಾನಕ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.

ಪ್ರಿಯಕರನ ಕತ್ತನ್ನು ರೇಜರ್‌ನಿಂದ ಸೀಳಿ ಬರ್ಬರವಾಗಿ ಹತ್ಯೆಗೈದು ಸೂಟ್‍ಕೇಸ್‍ನಲ್ಲಿ ಪ್ಯಾಕ್ ಮಾಡಿರುವ ಆರೋಪ ಎದುರಿಸುತ್ತಿದ್ದಾಳೆ ಪ್ರೀತಿ ಶರ್ಮಾ ಎಂಬ ಯುವತಿ. ಈಕೆ ಮತ್ತು ಫಿರೋಜ್ ಅಲಿಯಾಸ್ ಚ್ವಾನಿ ಇಬ್ಬರೂ ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಜತೆಯಲ್ಲಿಯೇ ಅನೇಕ ವರ್ಷ ಇದ್ದರು. ಈ ವೇಳೆ ಅನೇಕ ಬಾರಿ ಈಕೆಯ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಫಿರೋಜ್​. ಮೊದಲಿಗೆ ಮದುವೆಯಾಗುವ ಭರವಸೆ ನೀಡಿ ಸಂಪರ್ಕದಲ್ಲಿದ್ದು, ಕೊನೆಗೆ ಯುವತಿ, ಪದೇ ಪದೇ ಮದುವೆಯ ವಿಷಯ ಎತ್ತಿದ್ದಾಳೆ. ಆಗ ಇದಕ್ಕೆ ನಿರಾಕರಿಸಿದ್ದಾನೆ.

ತಮ್ಮದು ಬೇರೆ ಬೇರೆ ಧರ್ಮ ಆಗಿರುವ ಕಾರಣ ಮದುವೆ ಸಾಧ್ಯವಿಲ್ಲ ಎಂದಿದ್ದಾನೆ. ಇದರಿಂದ ಇಬ್ಬರ ನಡುವೆ ವಾಗ್ವಿವಾದ ನಡೆದಿದೆ. ಎಷ್ಟೇ ಕೋರಿಕೊಂಡರೂ ಆತ ಮದುವೆಗೆ ಒಪ್ಪಲಿಲ್ಲ. ಬದಲಿಗೆ ಆತ ಅವಳನ್ನೆ ಸಂಶಯದಿಂದ ನಿಂದಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಯುವತಿ, ಕತ್ತನ್ನು ರೇಜರ್‌ನಿಂದ ಸೀಳಿ ಬರ್ಬರವಾಗಿ ಹತ್ಯೆಗೈದು ಸೂಟ್‍ಕೇಸ್‍ನಲ್ಲಿ ಪ್ಯಾಕ್ ಮಾಡಿದ್ದಾಳೆ.

ನಂತರ ಹೆಣವನ್ನು ಸಾಗಿಸಲು ಯತ್ನಿಸುತ್ತಿದ್ದಳು. ತಡರಾತ್ರಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಮಹಿಳೆಯೊಬ್ಬರು ಕಪ್ಪು ಟ್ರಾಲಿ ಬ್ಯಾಗ್ ಹಿಡಿದುಕೊಂಡು ನಡೆದು ಬರುತ್ತಿರುವುದನ್ನು ಗಮನಿಸಿ ಸಂದೇಹಗೊಂಡಿದ್ದಾರೆ. ಪ್ರಶ್ನಿಸಿದಾಗ ಪ್ರೀತಿ ತಡವರಿಸಿದ್ದಾಳೆ. ನಂತರ ಕಾನ್​ಸ್ಟೆಬಲ್​ ಸೂಟ್‍ಕೇಸ್​ ತೆರೆದಾಗ ಶವ ಕಂಡಿದೆ. ಯುವತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯಿಬಿಟ್ಟಿದ್ದಾಳೆ.

ಈತನ ಕೊಂದು ಶವ ಹಾಕಲು ಟ್ರಾಲಿ ಬ್ಯಾಗ್ ಖರೀದಿಸಿದ್ದೆ. ಅದರೊಳಗೆ ಶವವನ್ನು ತುಂಬಿಕೊಂಡು ಗಾಜಿಯಾಬಾದ್ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಹಳಿಯ ಮೇಲೆ ಎಸೆಯಲು ಹೋಗುತ್ತಿದ್ದೆ ಎಂದಿದ್ದಾಳೆ. ಆದರೆ ಅದಾಗಲೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

Edited By : Abhishek Kamoji
PublicNext

PublicNext

11/08/2022 01:32 pm

Cinque Terre

85.65 K

Cinque Terre

7

ಸಂಬಂಧಿತ ಸುದ್ದಿ