ತುಮಕೂರು : ತೆಲುಗಿನ ಅರುಂದತಿ ಸಿನಿಮಾ ನೋಡಿ ಪ್ರಭಾವಿತನಾದ ಯುವಕನೊಬ್ಬ ಸಿನಿಮಾ ಶೈಲಿಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಧುಗಿರಿ ತಾಲ್ಲೂಕು ಗಿಡ್ಡಯ್ಯನ ಪಾಳ್ಯದಲ್ಲಿ ನಡೆದಿದೆ.
ಗಿಡ್ಡಯ್ಯನ ಪಾಳ್ಯದ ಯುವಕ ರೇಣುಕ (22) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಗಿಡ್ಡಯ್ಯನಪಾಳ್ಯ ನಿವಾಸಿ ಸಿದ್ದಪ್ಪ ಎಂಬುವವರ ಮಗ ರೇಣುಕ ತುಮಕೂರಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ,ಸಿನಿಮಾ ಬಗ್ಗೆ ವಿಪರೀತ ಗೀಳು ಹಚ್ಚಿಕೊಂಡಿದ್ದ ಈತ ಕಾಲೇಜಿನಿಂದ ಮನೆಗೆ ಬಂದು ಅರುಂದತಿ ಸಿನಿಮಾ ವೀಕ್ಷಸಿದ್ದಾನೆ.
ಬಳಿಕ ಪುರವರಕ್ಕೆ ತೆರಳಿ ಪೆಟ್ರೋಲ್ ತಂದಿದ್ದಾನೆ ಬಳಿಕ ತಮ್ಮದೇ ರೇಷ್ಮೆ ತೋಟಕ್ಕೆ ತೆರಳಿ ಪೆಟ್ರೋಲ್ ಸುರಿದುಕೊಂಡು ಬೆಂಕಿಹಚ್ಚಿಕೊಂಡಿದ್ದಾನೆ. ಇನ್ನು ಈತ ಬೆಂಕಿಹಚ್ಚಿಕೊಂಡಿದನ್ನು ನೋಡಿದ ಪೋಷಕರು ಓಡಿ ಬಂದು ಬೆಂಕಿನಂದಿಸಿ ಮಗನಪ್ರಾಣ ರಕ್ಷಿಸಿದ್ದಾರೆ. ಯಾಕಪ್ಪಾ ಹೀಗೆ ಮಾಡಿದೆ ಎಂದು ಕೇಳಿದಾಗ 'ನನಗೆ ಮುಕ್ತಿ ಬೇಕು ಮುಕ್ತಿ ಬೇಕು' ಎಂದು ಯುವಕ ಕನವರಿಸಿದ್ದಾನೆ.
ರೇಣುಕಾನಿಗೆ ಮಧುಗಿರಿ ಹಾಗೂ ತುಮಕೂರಿನಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
PublicNext
11/08/2022 01:17 pm