ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರಟಗೆರೆ :ಬಸ್ ನಿಲ್ದಾಣದಲ್ಲಿ ನಿಂತಿದ್ದ ವ್ಯಕ್ತಿಗೆ ದ್ವಿಚಕ್ರವಾಹನ ಡಿಕ್ಕಿ: ಯುವಕ ಪರಾರಿ!

ಕೊರಟಗೆರೆ : ತಾಲ್ಲೂಕಿನ ಕಲ್ಲುಗುಟ್ಟರಹಳ್ಳಿ ಗ್ರಾಮದ ರಾಮಕೃಷ್ಣಪ್ಪ (65) ವರ್ಷದ ವ್ಯಕ್ತಿ ಕೊರಟಗೆರೆ ಪಟ್ಟಣಕ್ಕೆ ಹೋಗಲು ಜಂಪೇನಹಳ್ಳಿ ಕ್ರಾಸ್ ಬಳಿ ಬಸ್ ಗಾಗಿ ನಿಂತಿದ್ದ ಸಂದರ್ಭದಲ್ಲಿ ತೋವಿನಕೆರೆ ಮಾರ್ಗವಾಗಿ ಅತಿ ವೇಗವಾಗಿ ಬಂದ ದ್ವಿಚಕ್ರ ವಾಹನ ಸವಾರನೋರ್ವ ನಿಯಂತ್ರಣ ಕಳೆದುಕೊಂಡು ಏಕಾಏಕಿ ವಿಶ್ರಾಂತಿ ಗೃಹದ ಬಳಿ ನಿಂತಿದ್ದ ರಾಮಕೃಷ್ಣಪ್ಪನಿಗೆ ಗುದ್ದಿ ಗಾಯಗೊಳಿಸಿ ಪರಾರಿಯಾಗಿದ್ದಾನೆ.

ದ್ವಿಚಕ್ರ ವಾಹನ ಸವಾರ ಗುದ್ದಿದ ರಭಸಕ್ಕೆ ರಾಮಕೃಷ್ಣಪ್ಪನ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ.

ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಮೃತ ರಾಮಕೃಷ್ಣಪ್ಪನ ಸಂಬಂಧಿ ವಿಜಯ್ ಕುಮಾರ್ ದೂರು ನೀಡಿದ್ದು,ಕೊರಟಗೆರೆ ಪೊಲೀಸ್ ಠಾಣಾ ಸಿಪಿಐ ಸುರೇಶ್ ಮತ್ತು ಪಿಎಸ್ ಐ ನಾಗರಾಜು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು ಅನಾಹುತಕ್ಕೆ ಕಾರಣವಾಗಿ ಪರಾರಿಯಾಗಿರುವ ದ್ವಿಚಕ್ರವಾಹನ ಸವಾರನ ವಿರುದ್ಧ ಹಿಟ್&ರನ್ ಕೇಸ್ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.

Edited By : Nirmala Aralikatti
PublicNext

PublicNext

09/08/2022 09:52 pm

Cinque Terre

51.75 K

Cinque Terre

0

ಸಂಬಂಧಿತ ಸುದ್ದಿ