ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುರುವೇಕೆರೆ: ಸರಗಳ್ಳರನ್ನು ಹಿಡಿದ ಗ್ರಾಮಸ್ಥರು!

ತುರುವೇಕೆರೆ: ಮಹಿಳೆಯೋರ್ವರಿಗೆ ಕಾರದಪುಡಿ ಎರಚಿ ಮಾಂಗಲ್ಯ ಸರ ಕದ್ದೊಯ್ಯಲೆತ್ನಿಸಿದ ಕಳ್ಳರನ್ನು ಹಿಡಿದ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲ್ಲೂಕಿನ ದಂಡಿನ ಶಿವರ ಹೋಬಳಿಯ ಹಾಲು ಗೊಂಡನಹಳ್ಳಿಯಲ್ಲಿ ಇಂದು ನಡೆದಿದೆ.

ಹೌದು ಮಹಿಳೆಯಿಂದ ಸರ ಎಗರಿಸಿ ತಪ್ಪಿಸಿಕೊಳ್ಳಲು ದಾರಿ ಕಾಣದೆ ಅಡಿಕೆ ತೋಟಕ್ಕೆ ನುಗ್ಗಿ ಮಣ್ಣಿನಲ್ಲಿ ದ್ವಿಚಕ್ರ ವಾಹನ ಸಿಲುಕಿ ಕೊಂಡು ಮುಂದೆ ತೆರಳಲಾರದೆ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಹಾಲು ಗೊಂಡನಹಳ್ಳಿ ಗ್ರಾಮದ ಸುಜಾತ ಎಂಬುವವರು ತೋಟಕ್ಕೆ ತೆರಳುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಯುವಕರು ಮಹಿಳೆಯಿಂದ ಬಲವಂತವಾಗಿ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಿದ್ದರು. ನಂತರ ಮಹಿಳೆಯ ಚೀರಾಟ ಕೇಳಿದ ಸ್ಥಳೀಯರು ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ದಂಡಿನ ಶಿವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

ಬಂಧಿತರನ್ನು ಚನ್ನರಾಯ ಪಟ್ಟಣ ತಾಲ್ಲೂಕಿನ ದಿಡಗ ಗ್ರಾಮದ ಯೋಗೀಶ್ ಮತ್ತು ರಾಕೇಶ್ ಎಂದು ಗುರುತಿಸಲಾಗಿದೆ.

ವರದಿ: ರಾಘವೇಂದ್ರ ದಾಸರಹಳ್ಳಿ,ಪಬ್ಲಿಕ್ ನೆಕ್ಸ್ಟ್

Edited By : Nagesh Gaonkar
PublicNext

PublicNext

08/08/2022 07:40 pm

Cinque Terre

44.82 K

Cinque Terre

0